Connect with us

DAKSHINA KANNADA

ಬೈಕ್ ಅಪಘಾತದಲ್ಲಿ ಸವಾರ ಗಂಭೀರ – ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಮಂಗಳೂರು, ಮೇ 07: ನಗರದ ಪದವಿನಂಗಡಿ ಬಳಿ ಇಂದು ಮಂಜಾನೆ ಭೀಕರ ರಸ್ತೆ ಅಫಘಾತ ನಡೆದಿದ್ದು, ಈ ಘಟನೆಯ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೋಂದೆಲ್ ನಿಂದ ಕೆಪಿಟಿ ಕಡೆಗೆ ವೇಗವಾಗಿ ಬರುತ್ತಿದ್ದ ಬೈಕ್ ಸವಾರನಿಗೆ ಒಮ್ಮೆಲೇ ಅಡ್ಡವಾಗಿ ಬಂದಿದ್ದು ಸ್ಕೂಟರ್ ನ್ನು  ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಅಂಗಡಿಗೆ ಗುದ್ದಿದ್ದಾನೆ.

ಬೈಕ್ ಅಫಘಾತದ ತೀವ್ರತೆಗೆ ಬೈಕ್ ನಿಂದ ಸವಾರ ಗಾಳಿಯಲ್ಲಿ ಹಾರಿ ರಸ್ತೆಗೆ ಅಪ್ಪಳಿಸಿದ ದೃಶ್ಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ ಈತನ ಬೈಕ್ ಹಿಂಬದಿಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನವು ಬೈಕ್ ಗೆ ಗುದ್ದಿದೆ.

ಅಫಘಾತದಲ್ಲಿ ಬೈಕ್ ಸವಾರ ಬೊಂದೇಲ್ ನಿವಾಸಿ ಪ್ರಶಾಂತ್ಗೆ  ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.

Video: