Connect with us

    LATEST NEWS

    ವಿವಾದಕ್ಕೆ ಕಾರಣವಾದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪಾರ್ಕಿಂಗ್ ಆದೇಶ; ಸ್ಪಷ್ಟನೆ ನೀಡಿದ ವ್ಯವಸ್ಥಾಪನಾ ಸಮಿತಿ

    ಪುತ್ತೂರು, ಅಗಸ್ಟ್ 30: ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಹಿಂದೂ ಗಳು ಹೊರತುಪಡಿಸಿ ಅನ್ಯಧರ್ಮದವರು ವಾಹನಗಳನ್ನು ಪಾರ್ಕಿಂಗ್ ಮಾಡಬಾರದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

    ಹಿಂದೂ ಧಾರ್ಮಿಕ ದತ್ತಿ ಕಾಯಿದೆಯಡಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಕಾರ್ಯನಿರ್ವಹಿಸುತ್ತಿದ್ದು, ಹಿಂದೂಗಳಿಗೆ ಮೊದಲ ಪ್ರಾಶಸ್ತ್ಯ ವನ್ನು ನೀಡಬೇಕು. ಮತ್ತು ಅನ್ಯಧರ್ಮದವರಿಗೆ ದೇವಳಕ್ಕೆ ಸೇರಿದ ಜಾಗದಲ್ಲಿ ಅವಕಾಶ ನೀಡಬಾರದಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿತ್ತು.

    ಹಿಂದೂ ಪರ ಸಂಘಟನೆಗಳ ಮನವಿ ಆಲಿಸಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ನೇತೃತ್ವದ ಸಮಿತಿ’ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವಮಾರು ಗದ್ದೆಯಲ್ಲಿ ಹಿಂದೂಗಳು ಹೊರತು ಪಡಿಸಿ ಅನ್ಯಧರ್ಮದವರು ವಾಹನ ಪಾರ್ಕಿಂಗ್ ಮಾಡಬಾರದು’ ಎಂಬ ಆದೇಶ ಹೊರಡಿಸಿದ್ದಾರೆ.

    ಈ ಹಿಂದೆಯೂ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ದೇವಸ್ಥಾನದ ಜಾತ್ರೆಯ ಸಂಧರ್ಭದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿತ್ತು. ಹಿಂದೂ ಸಂಘಟನೆಗಳ ಮನವಿಯಂತೆ ದೇವಸ್ಥಾನದ ಜಾತ್ರಾ ಮಹೋತ್ಸವ ದ ಸಂಧರ್ಭದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶವನ್ನು ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ನಿಷೇಧ ಮಾಡಿತ್ತು. ಇದಾದ ಬಳಿಕ ಈಗ ಅನ್ಯಧರ್ಮದವರಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆ ಯನ್ನೂ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ನಿಷೇಧಿಸಿದೆ.

    ವಿಶಾಲವಾದ ದೇವಮಾರು ಗದ್ದೆಯಲ್ಲಿ ಅನ್ಯಧರ್ಮದವರಿಗೆ ವಾಹನ ಪಾರ್ಕಿಂಗ್ ಅವಕಾಶ ನೀಡದಿರೋದನ್ನು ಹಿಂದೂ ಪರ ಸಂಘಟನೆಗಳು ಸ್ವಾಗತ ಮಾಡಿದರೆ,ಎಡ ಪಂಥೀಯರು ಮಾತ್ರ ಇದು ಅಸಹಿಷ್ಣುತೆಯ ಪರಮಾವಧಿ ಅಂತಾ ಟೀಕೆ ಮಾಡಿದ್ದಾರೆ.ವಾಹನದಲ್ಲೂ ಧರ್ಮ ಹುಡುಕುವ ಕೆಲಸ ಮಾಡೋದು ಸರಿ ಅಲ್ಲ ಎಂದು ವಿರೋಧಿಸಿದ್ದಾರೆ.

    ದೇವಸ್ಥಾನದ ಆವರಣದಲ್ಲಿ ಅನಧಿಕೃತವಾಗಿ ವಾಹನ ಪಾರ್ಕ್ ಮಾಡುವ ಹಾಗೂ ರಾತ್ರಿ ಹೊತ್ತಿನಲ್ಲಿ ಕಾರು ನಿಲ್ಲಿಸಿ ಕಾರಿನೊಳಗೆ ಅಸಭ್ಯವಾಗಿ ನಡೆದುಕೊಳ್ಳುವ ಹಾಗೂ ದೇವಸ್ಥಾನದ ವಠಾರದಲ್ಲಿರುವ ಗೋವುಗಳನ್ನು ಕದಿಯುವ ಹಲವು ಪ್ರಕರಣಗಳು ನಡೆದಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ದೇವಸ್ಥಾನದ ಎಲ್ಲಾ ಜಾಗಕ್ಕೂ ಆವರಣಗೋಡೆ ಹಾಕುವ ಯೋಜನೆಯನ್ನೂ ಮಾಡಲಾಗಿದೆ.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್,ಹಿಂದೂ ಧಾರ್ಮಿಕ ದತ್ತಿ ಕಾಯಿದೆಯಡಿ ಮಹಾಲಿಂಗೇಶ್ವರ ದೇವಸ್ಥಾನದ ಬರೋದರಿಂದ,ಹಿಂದೂ ಭಕ್ತಾಧಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ‌. ಈ ಹಿಂದೆ ಅನ್ಯಧರ್ಮದವರು ಗದ್ದೆಯಲ್ಲಿ ವಾಹನ ಪಾರ್ಕಿಂಗ್ ಮಾಡಿ ಹೋಗುತ್ತಿದ್ದರಿಂದ ದೇವಳಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತಿತ್ತು. ಮತ್ತು ಈ ಬಗ್ಗೆ ಸಾಕಷ್ಟು ದೂರುಗಳೂ ಬಂದಿರುವ ಹಿನ್ನಲೆಯಲ್ಲಿ ಈ ಆದೇಶವನ್ನು ಮಾಡಲಾಗಿದೆ ಅಂತಾ ಸ್ಪಷ್ಟಪಡಿಸಿದ್ದಾರೆ.‌ ಒಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ಸದ್ಯ ಅನ್ಯಧರ್ಮದವರಿಗೆ ಪಾರ್ಕಿಂಗ್ ನಿಷೇಧ ವಿಚಾರ ಚರ್ಚೆಯನ್ನು ಹುಟ್ಟು ಹಾಕಿದೆ. ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಯ ಆದೇಶ ಇನ್ಯಾವ ರೂಪವನ್ನು ಪಡೆಯುತ್ತದೆ ಎಂಬುವುದನ್ನು ಕಾದುನೋಡಬೇಕಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply