Connect with us

    LATEST NEWS

    ರಾಷ್ಟ್ರಧ್ವಜವನ್ನು ಇನ್ನು ರಾತ್ರಿಯೂ ಹಾರಿಸಬಹುದು

    ನವದೆಹಲಿ, ಜುಲೈ 24: ಕೇಂದ್ರ ಸರ್ಕಾರವು ಧ್ವಜ ಸಂಹಿತೆಯಲ್ಲಿ ಬದಲಾವಣೆ ಮಾಡಿದ್ದು, ಇನ್ನು ಮುಂದೆ ರಾಷ್ಟ್ರಧ್ವಜವನ್ನು ರಾತ್ರಿಯೂ ಹಾರಿಸಬಹುದು ಮತ್ತು ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್‌ ಧ್ವಜಗಳನ್ನೂ ಬಳಸಬಹುದಾಗಿದೆ.

    ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಆಗಸ್ಟ್‌ 13ರಿಂದ 15ರ ವರೆಗೆ ನಡೆಯಲಿರುವ ‘ಹರ್‌ ಘರ್‌ ತಿರಂಗ’ ಅಭಿಯಾನದ ಅಂಗವಾಗಿ ಸರ್ಕಾರವು ಈ ಕ್ರಮ ಕೈಗೊಂಡಿದೆ. ಬದಲಾವಣೆಯಾಗಿರುವ ಧ್ವಜ ಸಂಹಿತೆಯ ಕುರಿತು ಅಜಯ್‌ ಭಲ್ಲಾ ಅವರು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

    ಈ ಹಿಂದೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಮಾತ್ರ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಯಂತ್ರದಿಂದ ತಯಾರಿಸಿದ ಮತ್ತು ಪಾಲಿಸ್ಟರ್‌ ಧ್ವಜಗಳನ್ನು ಬಳಸಲು ಅನುಮತಿ ಇರಲಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply