Connect with us

DAKSHINA KANNADA

ಕಾರ್ತಿಕ್ ಭಟ್  ಆತ್ಮಹತ್ಯೆ ಪ್ರಕರಣ, ಬಂಧಿತ ತಾಯಿ – ಸಹೋದರಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ..!

ಮಂಗಳೂರಿನ ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್  ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ತಾಯಿ ಮತ್ತು ಸಹೋದರಿ ಜಾಮೀನು ಕೋರಿ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮಂಗಳೂರು : ಮಂಗಳೂರಿನ ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್  ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ತಾಯಿ ಮತ್ತು ಸಹೋದರಿ ಜಾಮೀನು ಕೋರಿ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಶ್ಯಾಮಲಾ ಭಟ್ (61) ಮತ್ತು ಅವರ 36 ವರ್ಷದ ಪುತ್ರಿ ಕನ್ಮಣಿ ಜಿ. ರಾವ್ ಅವರನ್ನು ಕಳೆದ ನವೆಂಬರ್ 8 ರಂದು 32 ವರ್ಷದ ಕಾರ್ತಿಕ್ ಭಟ್ ರೈಲು ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಇಬ್ಬರೂ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಶ್ಯಾಮಲಾ ಮತ್ತು ಕನ್ಮಣಿ ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 483 ರ ಅಡಿಯಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ಗುರುವಾರ ನಡೆಯಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *