ಕೇರಳ ಜನವರಿ 01: ಲವ್ ಜಿಹಾದ್ ಆದರಿಸಿದ ಬಂದ ದಿ ಕೇರಳ ಸ್ಟೋರಿ ವಿವಾದದ ನಡುವೆ ಕೋಟಿ ಗಟ್ಟಲೇ ಹಣ ಗಳಿಸಿತ್ತು, ಇದೀಗ ಅದೇ ತಂಡ ದಿ ಕೇರಳ ಸ್ಟೋರಿಯ ಎರಡನೇ ಬಾಗವನ್ನು ಬಿಡುಗಡೆ ಮಾಡಲು ಮುಂದೆ ಬಂದಿದ್ದು, ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗುವ ಸಾಧ್ಯತೆ ಇದೆ.

2023ರಲ್ಲಿ ಬಿಡುಗಡೆಯಾದ ಸಿನಿಮಾ ‘ಲವ್ ಜಿಹಾದ್’ ವಿಷಯವನ್ನು ಆಧರಿಸಿದೆ. ಇದು ಹಲವು ಕಡೆಗಳಲ್ಲಿ ಬ್ಯಾನ್ ಆಯಿತು. ಸಿನಿಮಾ ವಿವಾದದಲ್ಲಿ ಸಿಲುಕಿದ್ದರೂ, ಸಿನಿಮಾ ಸಾಕಷ್ಟು ಹಣ ಗಳಿಸಿತು. ಸುದೀಪ್ತೋ ಸೇನ್ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಸೀಕ್ವೆಲ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
Read this – ಚಿಕ್ಕಮಗಳೂರು – ಎಕ್ಸ್ ಲವರ್ ಗೆ ವಿಶ್ ಮಾಡಿದ್ದಕ್ಕೆ ಯುವಕನ ಕೊಲೆ
ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಈಗ ಅಭಿಮಾನಿಗಳು ‘ದಿ ಕೇರಳ ಸ್ಟೋರಿ 2’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರ 2026ರಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
Read this – ಮಂಗಳೂರು ಬೆಂಗಳೂರು ನಡುವೆ ಮಧ್ಯೆ ವಂದೇಭಾರತ್ ರೈಲು – ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ
ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗವನ್ನು ಈಗಾಗಲೇ ಕೇರಳದಲ್ಲಿ ಚಿತ್ರೀಕರಿಸಲಾಗಿದ್ದು, ವರದಿಗಳ ಪ್ರಕಾರ, ಈ ಭಾಗವು ಹೆಚ್ಚು ಗಂಭೀರ ಮತ್ತು ಕರಾಳ ಕಥೆಯನ್ನು ಒಳಗೊಂಡಿರುತ್ತದೆ. ದಿ ಕೇರಳ ಸ್ಟೋರಿ 2’ ರ ಪಾತ್ರವರ್ಗ ಮತ್ತು ಇತರ ವಿವರಗಳನ್ನು ಗೌಪ್ಯವಾಗಿಡಲಾಗಿದೆ. ‘ದಿ ಕೇರಳ ಸ್ಟೋರಿ 2’ ಚಿತ್ರೀಕರಣವನ್ನು ಈಗಾಗಲೇ ಬಹಳ ಸುರಕ್ಷಿತ ರೀತಿಯಲ್ಲಿ ಮಾಡಲಾಗಿದೆ. ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಚಿತ್ರೀಕರಣದ ಸಮಯದಲ್ಲಿ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಂಡರು.



