Connect with us

    DAKSHINA KANNADA

    ಐಡಿಯಲ್ ಐಸ್ ಕ್ರೀಂ ಸಂಸ್ಥಾಪಕ ಎಸ್.ಪ್ರಭಾಕರ ಕಾಮತ್ ಇನ್ನಿಲ್ಲ

    ಮಂಗಳೂರು, ನವೆಂಬರ್ 06: ನಾಡಿನ ಪ್ರಸಿದ್ಧ ಐಸ್‌ಕ್ರೀಂ ಸಂಸ್ಥೆ ಐಡಿಯಲ್ಸ್‌ನ ಸ್ಥಾಪಕರಾದ ಎಸ್.ಪ್ರಭಾಕರ ಕಾಮತ್ (79) ಶನಿವಾರ ಮುಂಜಾನೆ ನಿಧನರಾದರು.

    ಕೆಲದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಅವರು ಪತ್ನಿ, ಪುತ್ರ, ಐಡಿಯಲ್ ಐಸ್ ಕ್ರೀಂ ಮುಖ್ಯಸ್ಥ ಮುಕುಂದ ಕಾಮತ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

    ಮಂಗಳೂರಿನಲ್ಲಿ ಟೈಲರಿಂಗ್ ವಸ್ತುಗಳ ವಿತರಣೆ, ಪಟಾಕಿ ವಿತರಣೆ ಮಾಡಿಕೊಂಡಿದ್ದ ಪ್ರಭಾಕರ ಕಾಮತ್ ಅವರು ವರ್ಷಪೂರ್ತಿ ಬೇಡಿಕೆಯ ಉದ್ಯಮ ಪ್ರಾರಂಭಿಸಲು ಮುಂದಾಗಿದ್ದರು. ಅದರಂತೆ ೧೯೭೫ರಲ್ಲಿ ಐಡಿಯಲ್ ಐಸ್ ಕ್ರೀಂ ಪಾರ್ಲರ್ ಆರಂಭಿಸಿದ್ದು, ಅವರೇ ಸ್ವತಃ ವಿವಿಧ ನಮೂನೆಯ ಐಸ್ ಕ್ರೀಂ ಮನೆಯಲ್ಲಿ ತಯಾರಿಸಿದ್ದರು. ಸ್ವಂತ ಪ್ರಯೋಗ ಹಾಗೂ ಹಲವು ಆವಿಷ್ಕಾರಗಳಿಂದಾಗಿ ಐಡಿಯಲ್ಸ್ ಮನೆಮಾತಾಗಿದೆ. ಪ್ರಭಾಕರ ಕಾಮತ್ ಅವರನ್ನು ಪ್ರೀತಿಯಿಂದ ಪಬ್ಬಾ ಮಾಮ್ ಎಂದೂ ಕರೆಯುತ್ತಿದ್ದು ಅದೇ ಹೆಸರಿನಲ್ಲಿ ಮಂಗಳೂರಿನಲ್ಲಿ ಐಸ್ ಕ್ರೀಂ ಪಾರ್ಲರ್ ಕೂಡಾ ಇದೆ.

    Share Information
    Advertisement
    Click to comment

    You must be logged in to post a comment Login

    Leave a Reply