ಮಕ್ಕಳಿಗೆ ವಿಷ ಉಣಿಸಿದ ತಾಯಿ ಸೇರಿ ಮೂವರ ಸಾವು

ಉಡುಪಿ, ಫೆಬ್ರವರಿ 10 : ಇಬ್ಬರು ಮಕ್ಕಳಿಗೆ ವಿಷ ಹಾಕಿ ತಾಯಿ ಆತ್ಮಹತ್ಯೆ ಮಾಡಿದ ದಾರುಣ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆಯ ವರಂಗದಲ್ಲಿ ಸಂಭವಿಸಿದೆ.

ದೀಪಾ (35) ಶ್ರೇಯಾ (9) ಪ್ರಿಯಾ (6) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.ಗರ್ಭಕೋಶದ ತೊಂದರೆಯಿಂದ ಬಳಲುತ್ತಿದ್ದ ದೀಪಾ ಆತ್ಮಹತ್ಯೆ ಮಾಡಲು ನಿರ್ಧಾರಕ್ಕೆ ಬಂದಿದ್ದಳು.

ತನ್ನ ಸಾವಿನ ನಂತರ ಮಕ್ಕಳು ಬದುಕಲ್ಲವೆಂದು ಎಂದು ನಂಬಿ ಮಕ್ಕಳಿಗೆ ವಿಷ ಹಾಕಿ ಕೊಲೆ ಮಾಡಲು ನಿರ್ಧರಿಸಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ಮಕ್ಕಳಿಗೆ ಉಣ ಬಡಿಸಿದ್ದು, ಜೊತೆಗೆ ತಾನು ಕೂಡ ಆತ್ಮಹತ್ಯೆ ಮಾಡಿದ್ದಳು.

ವಿಷಯ ತಿಳಿದ ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೂರೂ ಮೃತದೇಹಗಳನ್ನು ಶಿವಮೊಗ್ಗಕ್ಕೆ ರವಾನೆ ಮಡಲಾಗಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 Shares

Facebook Comments

comments