Connect with us

LATEST NEWS

ಮಣ್ಣು ಸಾಗಿಸುವ ಲಾರಿಗಳಿಂದ ಎದುರಾಗಿದೆ ಅಪಾಯ.. !! ಸುರಕ್ಷತೆಗೆ ಆಗ್ರಹ.

ಉಡುಪಿ, ಅಕ್ಟೋಬರ್ 28: ಉಡುಪಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ನಗರ ವಲಯದ ಪ್ರಮುಖ ರಸ್ತೆಗಳಲ್ಲಿ ಮಣ್ಣು ಸಾಗಿಸುವ ಲಾರಿಗಳು ಮಣ್ಣಿಗೆ ಹೊದಿಕೆ- ಟರ್ಪಾಲ್ ಹೊದಿಸದೆ ನಿತ್ಯವು ಸಾಗಿಸುತ್ತಿರುವುದು ಕಂಡು ಬಂದಿದೆ. ಸಾರ್ವಜನಿಕರು, ಬೈಕು ಸವಾರರು, ಹಿರಿಯ ನಾಗರಿಕರು ಬೀಸುವ ಗಾಳಿಯಲ್ಲಿ ಹಾರಿ ಬರುವ ಮಣ್ಣಿನ ಕಣಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಸಾರ್ವಜನಿಕರು ಕಣ್ಣಿನ ಸಮಸ್ಯೆಗಳಿಗೆ ತುತ್ತಾಗ ಬೇಕಾಗಿರುವ ಪರಿಸ್ಥಿತಿಯು ಮಣ್ಣು ಸಾಗಟದ ಲಾರಿಗಳಿಂದ ಎದುರಾಗಿದೆ. ಅದಲ್ಲದೆ ಲಾರಿಯಿಂದ ಉರುಳಿ ರಸ್ತೆಯಲ್ಲಿ ಬಿಳುವ ಮಣ್ಣಿನಿಂದ ರಸ್ತೆಯ ಅಂದವು ಕೆಡುತ್ತಿದೆ. ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವಾಗಿ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.

Video:

Facebook Comments

comments