Connect with us

    LATEST NEWS

    ರಾಜೆಂದ್ರ ಕುಮಾರ್ ಬಂಟಿಂಗ್ಸ್, ಹೋರ್ಡಿಂಗ್ಸ್ ವಿರುದ್ದ ಪ್ರಕರಣ ದಾಖಲು

    ರಾಜೆಂದ್ರ ಕುಮಾರ್ ಬಂಟಿಂಗ್ಸ್, ಹೋರ್ಡಿಂಗ್ಸ್ ವಿರುದ್ದ ಪ್ರಕರಣ ದಾಖಲು

    ಮಂಗಳೂರು, ಜನವರಿ 22 : ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರ ಸನ್ಮಾನ ಸಮಾರಂಭ ಕುರಿತ ಮಂಗಳೂರು ನಗರದಲ್ಲಿ ಹಾಕಿದ ಬಂಟಿಗ್ಸ್ ಮತ್ತು ಬ್ಯಾನರ್ , ಹೋರಡಿಂಗ್ಸ್ ಕುರಿತಂತೆ ಮಂಗಳೂರು ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬ್ಯಾನರ್ , ಹೋರ್ಡಿಂಗ್ಸ್ ಗಳನ್ನು ನಿಷೇಧಿಸಿದೆ.

    ಆದರೆ ಡಾ. ಎಮ್.ಎನ್ ರಾಜೇಂದ್ರ ಕುಮಾರ್ ರವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ 25 ವರ್ಷಗಳ ಸೇವೆಯ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶದ ಕಾರ್ಯಕ್ರಮವು ದಿನಾಂಕ:19-01-2019 ರಂದು ಮಂಗಳೂರು ನಗರದ ಫುಟ್ ಬಾಲ್ ಮೈದಾನ ಹಾಗೂ ನೆಹರೂ ಮೈದಾನದಲ್ಲಿ ನಡೆದಿದೆ. 

    ಕಾರ್ಯಕ್ರಮದ ಪ್ರಯುಕ್ತ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಜಂಕ್ಷನ್ ಗಳಲ್ಲಿ, ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಮತ್ತು ರಸ್ತೆ ವಿಭಾಜಕಗಳಲ್ಲಿ ಅನಧಿಕೃತ ಕಟೌಟ್ ಗಳನ್ನು ರಾಜರೋಷವಾಗಿಅಳವಡಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವುದರಿಂದ ಕಾರ್ಯಕ್ರಮದ ಆಯೋಜಕರ ವಿರುದ್ದ ಮಂಗಳೂರು ಮಹಾ ನಗರ ಪಾಲಿಕೆಯವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

    ರಾಜೇಂದ್ರ ಕುಮಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಕಾನೂನುಗಳನ್ನು ಗಾಳಿಗೆ ತೂರಿ ಪರಿಸರಕ್ಕೆ ಮಾರಕವಾದ ಬಂಟಿಂಗ್ಸ್, ಹೋರ್ಡಿಂಗ್ಸ್ ಗಳನ್ನು ನಗರದೆಲ್ಲೆಡೆ ಹಾಕಲಾಗಿತ್ತು.

    ಇದರ ಬಗ್ಗೆ ತೀವ್ರ ಪ್ರತಿಭಟನೆ ಸಲ್ಲಿಸಿದ್ದ ಪರಿಸರವಾದಿಗಳು ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಪರಿಸರ ಇಲಾಖೆಗಳಿಗೆ ದೂರನ್ನು ನೀಡಿತ್ತು.

    ಅಕ್ರ 15/2019 ಕಲಂ 188 283 290 IPC ಕಲಂ 3 Karnataka Open Place Disfigurement Act ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

    ಅದೂ ಅಲ್ಲದೆ ಈ ಹೋರ್ಡಿಂಗ್ಸ್ , ಬಂಟಿಂಗ್ಸ್ ಹಾಕಿದ ಮಂಗಳೂರಿನ ಮಧುಬನ್ ಗ್ರಾಫೀಕ್ಸ್ ಜಾಹಿತಾರು ಸಂಸ್ಥೆಯ ಮೇಲೂ ಕ್ರಮ ಕೈಗೊಳ್ಳಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply