DAKSHINA KANNADA
ಸೇತುವೆಗೆ ಡಿಕ್ಕಿ ಹೊಡೆದು ನೀರಿಗೆ ಕಾರು ಬಿದ್ದ ಕಾರು; ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಕಾಣಿಯೂರು, ಜುಲೈ 10: ಸೇತುವೆಗೆ ಡಿಕ್ಕಿ ಹೊಡೆದು ನೀರಿಗೆ ಕಾರು ಬಿದ್ದ ಪ್ರಕರಣ, ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬಿದ್ದ ಜಾಗದಿಂದ 100 ಮೀ. ದೂರದಲ್ಲಿ ಕಾರು ಪತ್ತೆಯಾಗಿದೆ.
ಆದರೇ ಅದನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದಾಗ ನೀರು ಹರಿಯುವ ರಭಸಕ್ಕೆ ಕಾರು ಮತ್ತೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇದೀಗ ಮತ್ತೆ ಹರಸಾಹಸ ಪಟ್ಟು ಅಗ್ನಿಶಾಮಕ ದಳದ ಸಿಬ್ಬಂದಿ ಕಾರನ್ನು ಮೇಲಕ್ಕೆತ್ತಿದ್ದಾರೆ. ಆದರೇ ಕಾರಿನಲ್ಲಿದ್ದವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ನೀರಿನ ರಭಸಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಾರು ವಿಟ್ಲ ಕುಂಡಡ್ಕ ನಿವಾಸಿ ಧನುಷ್(26) ರವರದ್ದು ಎಂದು ತಿಳಿದು ಬಂದಿದ್ದು, ಕಾರಿನಲ್ಲಿ ವಾಹನ ಚಲಾಯಿಸುತ್ತಿದ್ದ ಧನುಷ್ ರವರ ಸಂಬಂಧಿ ಮಂಜೇಶ್ವರ ಮೂಲದ ಧನುಷ್(21) ಕೂಡ ಇದ್ದರು ಎಂದು ತಿಳಿದು ಬಂದಿದೆ.
ಅಪಘಾತದ ನಂತರ ಮನೆಯವರಿಗೆ ಕಾಲ್ ಮಾಡಿದ್ದ ಕಾರಿನಲ್ಲಿದ್ದ ಯುವಕರು ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎಂದಿದ್ದಾರೆ. ಸದ್ಯ ಮನೆಗೆ ಕರೆ ಬಂದ ನಂಬರ್ ನ ಲೊಕೇಶನ್ ಟ್ರೇಸ್ ಮಾಡುತ್ತಿರುವ ಪೊಲೀಸರು ಸ್ಥಳೀಯ ಆಸ್ಪತ್ರೆಗಳಲ್ಲಿಯೂ ವಿಚಾರಿಸುತ್ತಿದ್ದಾರೆ.