Connect with us

    BANTWAL

    ಟಿಕ್ಕ ಪಾರ್ಸಲ್ ಪಡೆಯಲು ಬಂದಿದ್ದ ಬಾಲಕನ ಮೇಲೆ ಮಾಲಕನಿಂದಲೇ ಅತ್ಯಾಚಾರ..!

    ಬಂಟ್ವಾಳ, ಅಕ್ಟೋಬರ್ 06: ಟಿಕ್ಕ ಪಾರ್ಸೆಲ್ ಪಡೆಯಲು ಶಾಪ್ ಗೆ ಬಂದ ಅಪ್ರಾಪ್ತ ಶಾಲಾ ಬಾಲಕನ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಈ ಬಗ್ಗೆ ಮನೆಯವರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ  ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದೆ.

    ಕಲ್ಲಡ್ಕ ವಿಟ್ಲ ರಸ್ತೆಯಲ್ಲಿರುವ ‘ಟಿಕ್ ಪಾಯಿಂಟ್’ ಮಾಲಕ ಮಹಮ್ಮದ್ ಆಶ್ರಫ್ ಎಂಬಾತನೇ ಅತ್ಯಾಚಾರ ಎಸಗಿದ ಆರೋಪಿ. ಬಾಲಕ ಕಲ್ಲಡ್ಕದಲ್ಲಿರುವ ಟಿಕ್ಕಪಾಯಿಂಟ್‌ಗೆ ಪಾರ್ಸೆಲ್ ತರಲು ರಾತ್ರಿ ಸುಮಾರು 8 ಗಂಟೆಗೆ ಬಂದ ವೇಳೆ ಅತ್ಯಾಚಾರ ನಡೆಸಲಾಗಿದೆ.

    ಬಾಲಕ ಟಿಕ್ಕ ಪಾರ್ಸೆಲ್ ಕೇಳಿದಾಗ , ಟಿಕ್ಕ ಪಾರ್ಸೆಲ್ ಕೊಂಡುಹೋಗಲು ಪ್ಲಾಸ್ಟಿಕ್ ಚೀಲವನ್ನು ತರುವಂತೆ ಅಂಗಡಿ ಯ ಒಳಗೆ ಬರುವಂತೆ ಹೇಳಿ, ಬಾಲಕ ಪ್ಲಾಸ್ಟಿಕ್ ಚೀಲ ತರಲು ಒಳಗೆ ಹೋದ ವೇಳೆ ಆರೋಪಿ ಬಾಲಕನ ಹಿಂಬದಿಯಿಂದ ಹೋಗಿ ಆತನನ್ನು ಹಿಡಿದು ಎತ್ತಿಕೊಂಡು ಅಲ್ಲೇ ಸಮೀಪದ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

    ಅತ್ಯಾಚಾರ ನಡೆಸಿದ ಆರೋಪಿ ಘಟನೆ ನಡೆದು ಎರಡು ತಿಂಗಳ ಬಳಿಕ ಮತ್ತೆ ಅತ್ಯಾಚಾರಕ್ಕೆ ಯತ್ನ ಮಾಡಿ, ಬಾಲಕ ವಿರೋಧ ವ್ಯಕ್ತಪಡಿಸಿದಾಗ ಆರೋಪಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ಆಗಸ್ಟ್ 4ರಂದು ಬಾಲಕ ಮನೆಯಿಂದ ಕಲ್ಲಡ್ಕ ಪೇಟೆಗೆ ಹಾಲು ತರಲೆಂದು ಅಂಗಡಿ ಹೋಗಿ ವಾಪಾಸಾಗುವಾಗ ಎದುರಿನಿಂದ ಬಂದ ಆರೋಪಿ ಮಹಮ್ಮದ್ ಆಶ್ರಫ್ ಬಾಲಕನನ್ನು ಬರುವಂತೆ ಒತ್ತಾಯಿಸಿದ್ದಾನೆ.

    ಬಾಲಕ ನಾನು ಬರುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದಾಗ ಮತ್ತೊಮ್ಮೆ ಹಲ್ಲೆ ನಡೆಸಿದ್ದಾನೆ. ಆಗ ಬಾಲಕ ತಪ್ಪಿಸಿಕೊಂಡು ಮನೆಗೆ ಹೋಗಿ ಪೋಷಕರಲ್ಲಿ ವಿಚಾರ ತಿಳಿಸಿದ್ದಾನೆ. ಪೋಲಿಸರು ಆರೋಪಿಗಾಗಿ ಬಲೆ ಬೀಸಿದ್ದು ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply