Connect with us

    KARNATAKA

    ರೈಲ್ವೇ ನಿಲ್ದಾಣದಲ್ಲಿ ಬಾಂಬ್​ ಇದೆ ಎಂದು ಕರೆ ಮಾಡಿದ್ದ ಬಾಲಕ!, ಪಬ್​ ಜಿ ಹುಚ್ಚು ತಂದಿತು ಫಜೀತಿ

    ಬೆಂಗಳೂರು, ಎಪ್ರಿಲ್ 03: ಯಲಹಂಕ ರೈಲ್ವೇ ನಿಲ್ದಾಣದ ಕಂಟ್ರೋಲ್ ರೂಮ್​ಗೆ ಹುಸಿ ಬಾಂಬ್ ಕರೆ ಮಾಡಿದ 12 ವರ್ಷದ ಬಾಲಕ ಫಜೀತಿಗೆ ಸಿಲುಕಿದ್ದಾನೆ. ಬಾಗಲೂರು ವಿನಾಯಕನಗರದ ನಿವಾಸಿ 12 ವರ್ಷದ ಬಾಲಕ ಪಬ್ ​​ಜಿ ಆಟದ ಹುಚ್ಚು ಬೆಳೆಸಿಕೊಂಡಿದ್ದ.

    ಸದಾ ಪಾಲಕರ ಮೊಬೈಲ್​​ಫೋನ್​ನಲ್ಲಿ ಪಬ್ ​ಜಿ ಆಟವಾಡುತ್ತಿದ್ದ. ಪಾಲಕರು ಇತ್ತೀಚೆಗೆ ಫೋನ್ ಕೊಡದಿದ್ದರೂ, ಅವರ ಕಣ್ತಪ್ಪಿಸಿ ಸ್ನೇಹಿತನೊಂದಿಗೆ ಆಗಾಗ ಪಬ್ ​ಜಿ ಆಟವಾಡುತ್ತಿದ್ದ. ಬಾಲಕನ ಸ್ನೇಹಿತ ಮಾ.30ರಂದು 2 ಗಂಟೆಗೆ ಯಲಹಂಕ ರೈಲ್ವೆ ನಿಲ್ದಾಣದಿಂದ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಸ್ನೇಹಿತ ಹೋದರೆ ತನಗೆ ಪಬ್​ ಜಿ ಆಡಲು ಯಾರೂ ಇರುವುದಿಲ್ಲ ಎಂದು ಬೇಸರಗೊಂಡಿದ್ದ ಬಾಲಕ, ಹೇಗಾದರೂ ಮಾಡಿ ಸ್ನೇಹಿತ ರೈಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು ಎಂದು ಬಾಲಕನ  ಹುಸಿಬಾಂಬ್ ಕರೆ ಮಾಡಿದ್ದಾನೆ.

    ಮಾ.30ರಂದು ಮಧ್ಯಾಹ್ನ 11.30ರಲ್ಲಿ ತಾಯಿಯ ಕೀ ಪ್ಯಾಡ್ ಮೊಬೈಲ್​ಫೋನ್​ನಿಂದ ಯಲಹಂಕ ರೈಲ್ವೇ ಕಂಟ್ರೋಲ್ ರೂಮ್​ಗೆ ಕರೆ ಮಾಡಿ, ‘ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾರೆ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದ.

    ತಕ್ಷಣ ಎಚ್ಚೆತ್ತುಕೊಂಡ ರೈಲ್ವೇ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ, ಬಾಂಬ್‌ಸ್ಕ್ವಾಡ್, ಶಾನದಳದೊಂದೊಗೆ ರೈಲ್ವೇ ನಿಲ್ದಾಣಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಹೆಚ್ಚೂಕಡಿಮೆ ಒಂದೂವರೆ ಗಂಟೆ ನಿಲ್ದಾಣದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಎಲ್ಲೂ ಬಾಂಬ್ ಇರುವುದು ಪತ್ತೆಯಾಗಿರಲಿಲ್ಲ. ನಂತರ ಕಂಟ್ರೋಲ್ ರೂಮ್​ಗೆ ಕರೆ ಬಂದ ಮೊಬೈಲ್​ಫೋನ್​ ನಂಬರ್‌ನ್ನು ಪರಿಶೀಲಿಸಿದಾಗ ಬಾಲಕನ ಪಾಲಕರ ಸುಳಿವು ಸಿಕ್ಕಿತ್ತು. ಕೂಡಲೇ ಅವರ ಮನೆಗೆ ತೆರಳಿ ವಿಚಾರಿಸಿದಾಗ ಬಾಲಕ ಕೃತ್ಯ ಎಸಗಿರುವುದು ದೃಢಪಟ್ಟಿತ್ತು.

    ‘ನನ್ನ ಸ್ನೇಹಿತನಿಗೆ ಕರೆ ಮಾಡಿ ಬಾಂಬ್ ಇದೆ ಎಂದು ಹೆದರಿಸಲು ಮುಂದಾಗಿದ್ದೆ. ಅದು ತಪ್ಪಿ ರೈಲ್ವೇ ಕಂಟ್ರೋಲ್ ರೂಮ್​ಗೆ ಕರೆ ಹೋಗಿದೆ ಎಂದು ವಿಚಾರಣೆ ವೇಳೆ ಬಾಲಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಕರೆ ಮಾಡಿರುವುದು ಅಪ್ರಾಪ್ತನಾದ ಹಿನ್ನೆಲೆಯಲ್ಲಿ ಪೊಲೀಸರು, ಪ್ರಕರಣ ದಾಖಲಿಸದೇ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply