DAKSHINA KANNADA
ಆಸ್ಪತ್ರೆಯಲ್ಲಿ ಮಹಿಳೆ ಸ್ನಾನ ಮಾಡುವ ದೃಶ್ಯ ಸೆರೆ ಹಿಡಿದ ವ್ಯಕ್ತಿಯ ಬಂಧನ
ಉಳ್ಳಾಲ, ಫೆಬ್ರವರಿ 12: ನಗರದ ಆಸ್ಪತ್ರೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಮದನಿನಗರ ನಿವಾಸಿ ಅಬ್ದುಲ್ ಮುನೀರ್ (40) ಬಂಧಿತ ಆರೋಪಿಯಾಗಿದ್ದು, ಕಳೆದ ಕೆಲ ದಿನದಿಂದ ತಲೆಮರೆಸಿಕೊಂಡಿದ್ದ. ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರ ಜತೆಗಿದ್ದ ಮಹಿಳೆ ಸ್ನಾನ ಮಾಡಲು ತೆರಳಿದ್ದ ಸಂದರ್ಭ ಆರೋಪಿ ಮುನೀರ್ ಮೊಬೈಲ್ ಮೂಲಕ ಸ್ನಾನದ ದೃಶ್ಯವನ್ನು ಸೆರೆ ಹಿಡಿದಿದ್ದ ಎನ್ನಲಾಗಿದೆ.
ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರಗೆ ಬಂದಾಗ, ಆರೋಪಿ ಮುನೀರ್ ಅಲ್ಲಿಂದ ಪರಾರಿಯಾಗಿದ್ದನಂತೆ. ಈ ಕುರಿತು ಮಹಿಳೆ ಜ. 20ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು, ಆಸ್ಪತ್ರೆಯ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದು, ಈ ವೇಳೆ ಮುನೀರ್ ಸಿಕ್ಕಿಬಿದ್ದಿದ್ದಾನೆ.