ಉಡುಪಿ ಡಿಸೆಂಬರ್ 04 : ಹಣ ಮಾಡುವ ಆಸೆಗೆ ಟೆಲಿಗ್ರಾಂ ನಲ್ಲಿ ಬಂದ ಆನ್ಲೈನ್ ಟಾಸ್ಕ್ ಗ್ರೂಪ್ ಗಳನ್ನನ ನಂಬಿ ಉಡುಪಿಯ ವ್ಯಕ್ತಿಯೊಬ್ಬರು ಬರೋಬ್ಬರಿ 12 ಲಕ್ಷ ಕಳೆದುಕೊಂಡಿದ್ದಾರೆ.

ಉಡುಪಿ ನಿವಾಸಿ ಸದ್ಯ ದುಬೈನಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗೆ ಟೆಲಿಗ್ರಾಮ್ ನಲ್ಲಿ 12/11/2025 ರಂದು ಯಾರೋ ಅಪರಿಚಿತರು instaflow earnings ಎಂಬ ಹೆಸರಿನ ಟೆಲಿಗ್ರಾಮ್ ಗ್ರೂಪಿಗೆ ಸೇರಿಸಿದ್ದಾರೆ. ಅದರಲ್ಲಿ Priya (ADMIN) (USER NAME: @Priya29620) ಎಂಬವರು ಖಾತೆಯಿಂದ ಚಾಟಿಂಗ್ ಮಾಡಲು ಪ್ರಾರಂಭಿಸಿದ್ದು, ಆ ಚಾಟಿಂಗ್ಗೆ ದೂರುದಾರ ಕೂಡಾ ಉತ್ತರವನ್ನು ನೀಡುತ್ತಿದ್ದರು. ಅದೇ ದಿನ Dipannita (USER NAME: @Dipannita132) ಎಂಬ ಖಾತೆಯಿಂದ ಕೂಡಾ ದೂರುದಾರನ್ನು ಸಂಪರ್ಕಿಸಿ ಚಾಟಿಂಗ್ ಮಾಡಲು ಆರಂಭಿಸಿ ಪಿರ್ಯಾದಿದಾರನ್ನು REVENUE TASK ನಲ್ಲಿ ಹೂಡಿಕೆ ಮಾಡಲು ಹೇಳಿದ್ದಾರೆ. ಅದರಂತೆ ಮೊದಲು ಅವರು ತಿಳಿಸಿದ ಖಾತೆಗೆ 1,100/- ರೂಪಾಯಿ ಹೂಡಿ ಮಾಡಿದ್ದು, ಪಿರ್ಯಾದಿದಾರರಿಗೆ 1,530/- ರೂಪಾಯಿ ಲಾಭ ಬಂದಿರುತ್ತದೆ. ಹಾಗೆಯೇ ಪಿರ್ಯಾದಿದಾರರು ಸುಮಾರು 10-12 ಬಾರಿ 1,100/- ರೂಪಾಯಿಯಂತೆ ಅವರು ತಿಳಿಸಿದ ಖಾತೆಗೆ ಹೂಡಿಕೆ ಮಾಡಿದ್ದು, ಪ್ರತಿ ಬಾರಿಯೂ 1,530/- ರೂಪಾಯಿ ಲಾಭಾಂಶವು ದೊರೆತಿರುತ್ತದೆ.
Read This-ಚಾರ್ಮಾಡಿ – ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ – ಮೂರು ವರ್ಷದ ಬಾಲಕ ಸಾವು
ಬಳಿಕ ದಿನಾಂಕ: 14/11/2025 ರಂದು Nishmita Shetty (USER NAME: @Shettyfinance) ಎಂಬ ಖಾತೆದಾರರು ಚಾಟಿಂಗ್ ಮೂಲಕ ಸಂಪರ್ಕಿಸಿ ಹಲವಾರು ಟಾಸ್ಕ್ಗಳನ್ನು ನೀಡಿದ್ದು, ಪಿರ್ಯಾದಿದಾರರಿಗೆ digitvisionuoce.cc ಎಂಬ ವೆಬ್ ವಿಳಾಸವನ್ನು ನೀಡಿ, ಅದರಲ್ಲಿ USER NAME ಮತ್ತು ID ಯನ್ನು ಹಾಕುವಂತೆ ತಿಳಿಸಿದ್ದಾರೆ. ಅದರಂತೆ ಯುಸರ್ ನೇಮ್ ಹಾಗೂ ಐಡಿ ಹಾಕಿರುತ್ತಾರೆ. ಆ ಬಳಿಕ ಆವರು 4,00,000/- ರೂಪಾಯಿಗಳನ್ನು WIPRO BTC/USDT ಷೇರ್ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದ್ದು, ದಿನಾಂಕ: 15/11/2025 ರಂದು ಸಾಕ್ಷಿ ವೈಷ್ಣವ್ ಎಂಬ ಹೆಸರಿನ 10253924973 IFSC: IDFB0042326 ಎಂಬ ಬ್ಯಾಂಕ್ ಖಾತೆಯನ್ನು ನೀಡಿ ಈ ಖಾತೆಗೆ 50,000/- ರೂಪಾಯಿ ಗೂಗಲ್ಪೇ ಮಾಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಅವರು ತಿಳಿಸಿದ ಮೊತ್ತವನ್ನು ಗೂಗಲ್ಪೇ ಮಾಡಿರುತ್ತಾರೆ. ನಂತರ ಪಿರ್ಯಾದಿದಾರರು ದಿನಾಂಕ: 15/11/2025 ರಿಂದ 17/11/2025 ರವರೆಗೆ ಹಂತ ಹಂತವಾಗಿ ಒಟ್ಟು 12,25,000/- ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, Nishmita Shetty (USER NAME: @Shettyfinance) ಎಂಬ ಖಾತೆದಾರರು ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಅದರ ಲಾಭಾಂಶವನ್ನಾಗಲೀ ನೀಡಿರುವುದಿಲ್ಲ. ಈ ಬಗ್ಗೆ ಸೆನ್ಅಪರಾಧಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 63/2025, ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್. & ಕಲಂ 318(4) BNS ರಂತೆ ಪ್ರಕರಣ ದಾಖಲಿಸಲಾಗಿದೆ.



