ಬೆಂಗಳೂರು, ಮಾರ್ಚ್ 31: ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ. ಹೆಂಡ್ತಿ ಮನೆಯಲ್ಲಿ ಇಲ್ಲದ ವೇಳೆ ಗಂಡ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಗೆ ಬಂದ ಹೆಂಡ್ತಿ ಗಂಡನ ಶವ ಕಂಡು ಗಾಬರಿಯಾಗಿ ಅಪಾರ್ಟ್ಮೆಂಟ್ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಖಾಸಗಿ ಕಂಪನಿಯಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡ್ತಿದ್ದ ಭಾನುಚಂದ್ರ ರೆಡ್ಡಿ ಹಾಗೂ ಪತ್ನಿ ಸಾಜಿಯಾ ಮದುವೆ ಬಳಿಕ ಕೊತ್ತನೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ರು ಎಂದು ತಿಳಿದು ಬಂದಿದೆ. ಇದ್ದಕ್ಕಿದ್ದಂತೆ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುದ್ದಿ ಕೇಳಿ ಕುಟುಂಬಸ್ಥರು ಆಘಾತಗೊಂಡಿದ್ದಾರೆ.ವಿವಾದ ಸೃಷ್ಟಿಸಿದ “ಗುಲಾಬಿ ಆನೆ ಮೇಲೆ ಗುಲಾಬಿ ಸುಂದರಿ” ಫೋಟೋಶೂಟ್: ತನಿಖೆಗೆ ಆದೇಶ
ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಭಾನು ಚಂದ್ರರೆಡ್ಡಿ ಮನೆಯಲ್ಲೇ ಇದ್ದರಂತೆ. ಆರೋಗ್ಯದ ವಿಚಾರಕ್ಕೆ ನೊಂದಿದ್ದ ಭಾನು ಚಂದ್ರರೆಡ್ಡಿ ಪತ್ನಿ ಸಾಜಿಯಾ ಮನೆಯಲ್ಲಿ ಇಲ್ಲದ ವೇಳೆ ನೇಣು ಬಿಗಿದುಕೊಂಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ. ಕೆಲ ಸಮಯದ ಬಳಿಕ ಸಾಜಿಯಾ ಮನೆಗೆ ಮರಳಿದ್ದು, ನೇಣು ಬಿಗಿದ ಸ್ಥಿತಿಯಲ್ಲಿದ್ದ ಗಂಡನ ಶವ ಕಂಡು ಗಾಬರಿಯಾಗಿ ಅಪಾರ್ಟ್ಮೆಂಟ್ನಿಂದ ಹಾರಿ ಸಾವನ್ನಪ್ಪಿದ್ದಾರೆ ಎನ್ನುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸಾಜಿಯಾ 17ನೇ ಮಹಡಿಯಿಂದ ಹಾರಿ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರ ನಡುವೆ ಆಗಾಗ ಜಗಳವಾಗುತ್ತಲೇ ಇತ್ತು ಎನ್ನಲಾಗ್ತಿದೆ. ಜೊತೆಗೆ ಭಾನು ಚಂದ್ರ ರೆಡ್ಡಿಗೆ ಆರೋಗ್ಯ ಸಮಸ್ಯೆ ಕೂಡ ಹೆಚ್ಚಿದ ಹಿನ್ನೆಲೆ ಭಾನು ಚಂದ್ರ ಆತ್ಮಹತ್ಯೆಗೆ ಶರಣಾಗಿದ್ದು, ಈತನ ಸೂಸೈಡ್ಗೆ ಅನಾರೋಗ್ಯವೇ ಕಾರಣ ಎನ್ನಲಾಗ್ತಿದೆ.
ಭಾನು ಚಂದ್ರ ರೆಡ್ಡಿ ಹಾಗೂ ಸಾಜಿಯಾ ಇಬ್ಬರೂ ವಿದ್ಯಾವಂತರಾಗಿದ್ರು, ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ರು. ಈ ದಂಪತಿ ಆರ್ಥಿಕವಾಗಿ ಚೆನ್ನಾಗಿಯೇ ಇದ್ದರು ಎನ್ನಲಾಗ್ತಿದೆ. ಇಬ್ಬರ ನಡುವೆ ನಡೆಯುತ್ತಿದ್ದ ಕೌಟುಂಬಿಕ ಕಲಹದಿಂದ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.