Connect with us

    LATEST NEWS

    ಶಾಲಾ ಕೊಠಡಿಯಲ್ಲೇ ಶಿಕ್ಷಕರ ಹೊಡೆದಾಟ : ವಿಡಿಯೋ ವೈರಲ್

    ಚಿಕ್ಕಮಗಳೂರಿನಲ್ಲಿ ನಡೆದ ಘಟನೆ

    ಚಿಕ್ಕಮಗಳೂರು, ಜೂನ್ 4: ಜೂನ್ ಬಂತೂಂದ್ರೆ ಮಕ್ಕಳ ಕಲರವ ಕೇಳುತ್ತಿದ್ದ ಶಾಲೆಗಳೀಗ ಕೊರೊನಾ ಕಾರಣದಿಂದ ಮೌನವಾಗಿವೆ. ಆದರೆ, ಇಲ್ಲೊಂದು ಶಾಲೆಯಲ್ಲಿ ಮಕ್ಕಳ ಬದಲು ಶಿಕ್ಷಕರೇ ಹೊಡೆದಾಡಿಕೊಂಡು ಸುದ್ದಿಯಾಗಿದ್ದಾರೆ.

    ಹೌದು.. ಅದು ಚಿಕ್ಕಮಗಳೂರು ನಗರದ ಉಪ್ಪಳ್ಳಿ ಯುನೈಟೆಡ್ ಶಾಲೆ. ಕಳೆದ 20 ವರ್ಷಗಳಿಂದ ಶಾಲೆ ನಡೆಸುತ್ತಾ ಸಮಾಜದಲ್ಲಿ ಹೆಸರು ಮಾಡಿದ್ದ ಈ ಶಾಲೆಯಲ್ಲೀಗ ಶಿಕ್ಷಕರೇ ಹೊಡೆದಾಡಿಕೊಂಡಿದ್ದಾರೆ.

    ಶಾಲಾ ಕೊಠಡಿಯೊಳಗೆ ಪುರುಷರು, ಮಹಿಳೆಯರು ಎನ್ನದೆ ಯರ್ರಾಬಿರ್ರಿ ಹೊಡೆದಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಇನ್ನೊಂದು ಶಿಕ್ಷಣ ಸಂಸ್ಥೆ ತೆರೆಯುವ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಪ್ರಿನ್ಸಿಪಾಲ್ ನಡುವೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಹೊಡೆದಾಟ ನಡೆದಿದೆ ಎನ್ನಲಾಗಿದೆ.

    ಸಲೀಂ ಮತ್ತು ಜಮೀರ್ ಎನ್ನುವ ಇಬ್ವರು ಶಿಕ್ಷಕರ ನಡುವೆ ಈ ಹೊಡೆದಾಟ ನಡೆದಿದ್ದು ಇದನ್ನು ಜೊತೆಗಿದ್ದವರೇ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಚಿಕ್ಕಮಗಳೂರಿನಲ್ಲಿ ಭಾರೀ ವೈರಲ್ ಆಗಿದ್ದು ಶಿಕ್ಷಕರಿಬ್ಬರ ಜಂಗೀ ಕುಸ್ತಿ ಶಾಲೆಯ ಮಾನ ಹರಾಜು ಮಾಡಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply