Connect with us

LATEST NEWS

ಉಡುಪಿ ಜಿಲ್ಲೆಯಲ್ಲಿ 20 ಲಕ್ಷ ಗಿಡ ನೆಡುವ ಗುರಿ- ಡಾ.ಜಯಮಾಲಾ

ಉಡುಪಿ ಜಿಲ್ಲೆಯಲ್ಲಿ 20 ಲಕ್ಷ ಗಿಡ ನೆಡುವ ಗುರಿ- ಡಾ.ಜಯಮಾಲಾ

ಉಡುಪಿ, ಜೂನ್ 11 : ಪರಿಸರ ಸಂರಕ್ಷಣೆಯ ಉದ್ದೇಶದಿಂದ ಜಿಲ್ಲೆಯಲ್ಲಿ ಈ ವರ್ಷ 20 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮತ್ತು ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.

ಅವರು ಮಂಗಳವಾರ, ಬ್ರಹ್ಮಾವರ ಬಂಟರ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಉಡುಪಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ, ಸ್ವಚ್ಛಮೇವ ಜಯತೇ ಮತ್ತು ಜಲಾಮೃತ ಆಂದೋಲನ 2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಕುಲದ ಉಳಿವಿಗಾಗಿ, ಪ್ರಾಣಿ ಪಕ್ಷಿ ಸಂಕುಲ, ಜಲಚರಗಳ ಉಳಿವಿಗಾಗಿ ಪರಿಸರವನ್ನು ಸಂರಕ್ಷಿಸಬೇಕಿದೆ, ಪರಿಸರ ಸಂರ್ಷಕಣೆಯ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರೀಕರು ಕೈ ಜೋಡಿಸಬೇಕಿದೆ, ಪರಿಸರ ಸಂರಕ್ಷಣೆ ಮತ್ತು ಜಲ ಸಂರಕ್ಷಣೆ ಉದ್ದಶದಿಂದ ರಾಜ್ಯದಲ್ಲಿ 20 ಸಾವಿರ ಚೆಕ್ ಡ್ಯಾಂ ಗಳ ನಿರ್ಮಣ, 14000 ಕೆರೆ, ಕಟ್ಟೆ , ಕಲ್ಯಾಣಿ, ಗೋ ಕಟ್ಟೆಗಳ ಪುನ:ಶ್ಚೇತನಕ್ಕೆ ಕ್ರಮ ಕೈಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಈ ವರ್ಷ 20 ಲಕ್ಷ ಗಿಡ ನಡೆವ ಉದ್ದೇಶ ಹೊಂದಿದ್ದು, ಜಿಲ್ಲೆಯಲ್ಲಿರುವ , ಬಾವಿ, ಕರೆ ಮುಂತಾದ ಎಲ್ಲಾ ಬಗೆಯ ಜಲ ಮೂಲಗಳ ಹೊಳು ತೆಗೆಯುವ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.

ಪ್ರಸ್ತುತ ಇರುವ ಜಲ ಮೂಲಗಳನ್ನು ಸಂರಕ್ಷಿಸಿಕೊಂಡು ನೀರಿನ ಸದ್ಬಳಕೆ ನಡೆಯಬೇಕು, ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಕಟ್ಟಡ ಹಾಗೂ ಮನೆಗಳಲ್ಲಿ ಸಹ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವುದರಿಂದ ನೀರಿನ ಕೊರತೆ ತಪ್ಪಿಸಬಹುದು , ಸಾರ್ವಜನಿಕರಲ್ಲಿ ಜಲ ಸಂರಕ್ಷಣೆ , ನೀರಿನ ಸದ್ಬಳಕೆ ಮತ್ತು ಹಸಿರೀಕರಣದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಡಾ. ಜಯಮಾಲಾ ಹೇಳಿದರು.

ಸ್ವಚ್ಚತೆ ಇದ್ದರೆ ರೋಗಗಳು ಬರುವುದಿಲ್ಲ, ಸ್ವಚ್ಚತೆಯಿಂದ ಆರೋಗ್ಯಯುತ ಸಮಾಣ ನಿರ್ಮಾಣ ಸಾಧ್ಯ ಆದ್ದರಿಂದ ಮನೆಯಿಂದ ಪ್ರಾರಂಭಗೊಂಡು ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಸಮರ್ಪಕ ರೀತಿಯಲ್ಲಿನ ತ್ಯಾಜ್ಯ ವಿಲೇವಾರಿ ಕಾರ್ಯಕ್ರಮದಲ್ಲಿ ಎಸ್.ಎಲ್.ಆರ್.ಎಂ ಘಟಕದ ಸದಸ್ಯರು ನಿರ್ವಸುತ್ತಿರುವ ಕಾರ್ಯವನ್ನು ಶ್ಲಾಘಿಸಿ, ಸ್ವಚ್ಛಮೇವ ಜಯತೇ ಮೂಲಮಂತ್ರದ ಮೂಲಕ ಜಿಲ್ಲೆಯನ್ನು ಸ್ವಚ್ಛವಾಗಿಡೋಣ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *