Connect with us

    FILM

    ಕ್ಯಾನ್ಸರ್ ಗೆ ಬಲಿಯಾದ ತಮಿಳಿನ ಖ್ಯಾತ ಪೋಷಕ ನಟ

    ಚೆನೈ : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ಚಿತ್ರರಂಗದ ಜನಪ್ರಿಯ ಪೋಷಕ ನಟ ತಾವಸಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


    ತಮಿಳು ಚಿತ್ರರಂಗದಲ್ಲಿ ಕಳೆದ 27 ವರ್ಷಗಳಿಂದ ಸಕ್ರಿಯರಾಗಿದ್ದ ಇವರು 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ನಟರಾಗಿ ನಟಿಸಿದ್ದರು. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಧುರೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕೆಲ ದಿನಗಳ ಹಿಂದಷ್ಟೇ ಅವರು ಆರ್ಥಿಕ ಸಹಾಯಕ್ಕಾಗಿ ತಮಿಳು ನಟರ ಬಳಿ ಮನವಿ ಮಾಡಿಕೊಂಡಿದ್ದರು.


    ತಾವಸಿ ನಿಧನದ ಬಗ್ಗೆ ಆಸ್ಪತ್ರೆಯ ವೈದ್ಯ ಪಿ. ಸರವಣನ್ ಟ್ವೀಟ್ ಮಾಡಿದ್ದು, ‘ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ತಾವಸಿ ಅವರು ನ.11ರಂದು ಆಸ್ಪತ್ರೆಗೆ ದಾಖಲಾದರು. ತಕ್ಷಣವೇ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ, ಚಿಕಿತ್ಸೆ ಕೊಡಲು ಪ್ರಾರಂಭಿಸಿದೆವು. ಆದರೆ, ಅವರ ಆರೋಗ್ಯ ಕ್ಷೀಣಗೊಂಡಿದ್ದರಿಂದ ತುರ್ತು ಚಿಕಿತ್ಸಾ ಘಟಕಕ್ಕೆ ಇಂದು (ನ.23) ಸ್ಥಳಾಂತರ ಮಾಡಿದೆವು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರ ರಾತ್ರಿ 8 ಗಂಟೆಗೆ ನಿಧನರಾದರು’ ಎಂದು ಮಾಹಿತಿ ನೀಡಿದ್ದಾರೆ.

    ಇನ್ನು, ಕ್ಯಾನ್ಸರ್‌ನಿಂದಾಗಿ ತಾವಸಿ ತುಂಬ ತೂಕ ಕಳೆದುಕೊಂಡು, ಗುರುತೇ ಸಿಗದಂತೆ ಆಗಿದ್ದರು. ‘ನಾನು 1993ರಲ್ಲಿ ಮೊದಲ ಬಾರಿಗೆ ‘ಕಿಳಕ್ಕು ಚೀಮಯಿಲೆ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ರಜನಿಕಾಂತ್ ಅವರ ‘ಅಣ್ಣಾಥೆ’ ಸಿನಿಮಾದವರೆಗೂ ನಟಿಸುತ್ತಲೇ ಇದ್ದೇನೆ. ನಾನೆಂದಿಗೂ ಇಂಥದ್ದೊಂದು ಕಾಯಿಲೆಯಿಂದ ಬಳಲುತ್ತೇನೆ ಎಂದುಕೊಂಡಿರಲಿಲ್ಲ. ಸಿನಿಮಾರಂಗದವರು ನನಗೆ ಸಹಾಯ ಮಾಡಿ’ ಎಂದು ತಾವಸಿ ಮನವಿ ಮಾಡಿಕೊಂಡಿದ್ದರು. ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅನೇಕ ನಟರು ಸಹಾಯಕ್ಕೆ ಮುಂದಾಗಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply