ಚೆನ್ನೈ ನವೆಂಬರ್ 10: ತಮಿಳಿನ ಖ್ಯಾತ ನಟ ಧನುಷ್ ನಟಿಸಿರುವ ತುಳ್ಳುವಧೋ ಇಲಮೈ ಅಲ್ಲಿ ಎರಡನೇ ಹಿರೋ ಆಗಿ ನಟಿಸಿ ಹೆಸರು ಮಾಡಿದ್ದ ತಮಿಳು ನಟ ಅಭಿನಯ್ ಲಿವರ್ ಗೆ ಸಂಬಂಧಿಸಿದ ಕಾಯಿಲೆಯಿಂದಾಗಿ ತಮ್ಮ 44 ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ನಟನ ಕೊನೆಯ ಗಳಿಗೆಯಲ್ಲಿ ಚಿಕಿತ್ಸೆಗೆ ಸರಿಯಾದ ಹಣ ಹೊಂದಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು, ಇದೀಗ ಆತನ ಅಂತ್ಯಕ್ರಿಯೆ ಮಾಡಲು ಸಂಬಂಧಿಕರು ಯಾರು ಇಲ್ಲ ಎಂದು ವರದಿಯಾಗಿದೆ.

ಇತ್ತೀಚೆಗೆ ಅಭಿನಯ್ ತನ್ನ ಅನಾರೋಗ್ಯದ ಮಾತನಾಡುವ ಭಾವುಕ ವಿಡಿಯೋವನ್ನು ಹಂಚಿಕೊಂಡಿದ್ದರು. ಗಂಭೀರ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ನೆರವು ಬೇಕಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದರು. ನಾನು ಹೆಚ್ಚು ಕಾಲ ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ವೈದ್ಯರು ಒಂದೂವರೆ ವರ್ಷ ಮಾತ್ರ ಬದುಕುತ್ತೇನೆ ಎಂದಿದ್ದಾರೆ ಎನ್ನುವ ವಿಚಾರವನ್ನು ಅಭಿನಯ್ ವಿಡಿಯೋದಲ್ಲಿ ಹೇಳಿದ್ದರು.

ಅಭಿನಯ್ ‘ತುಳ್ಳುವಧೋ ಇಲಮೈ’ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದು ನಟ ಧನುಷ್ ಅವರಿಗೂ ಮೊದಲ ಚಿತ್ರವಾಗಿತ್ತು. ಸುಮಾರು 15ಕ್ಕೂ ಹೆಚ್ಚಿನ ತಮಿಳು, ತೆಲುಗು ಹಾಗೂ ಕನ್ನಡದ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಡಬ್ಬಿಂಗ್, ಸಿನಿಮಾ ಹಾಗೂ ಜಾಹೀರಾತುಗಳು ಸೇರಿವೆ. ಅವರ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ಇಲ್ಲದ ಕಾರಣ, ಪರಿಸ್ಥಿತಿಯನ್ನು ನಿರ್ಣಯಿಸಿ ಅಂತ್ಯಕ್ರಿಯೆ ನಡೆಸುವಂತೆ ನಾಡಿಗರ್ ಸಂಘದ ಪ್ರತಿನಿಧಿಗಳನ್ನು ಕೇಳಲಾಗಿದೆ.
ಅಭಿನಯ್ ತಮ್ಮ ವೃತ್ತಿಜೀವನವನ್ನು ಧನುಷ್ ಜೊತೆಗೆ ‘ತುಳ್ಳುವಧೋ ಇಲಮೈ’ ಚಿತ್ರದಲ್ಲಿ ಮಹತ್ವದ ಪಾತ್ರದೊಂದಿಗೆ ಪ್ರಾರಂಭಿಸಿದರು, ಇದು ಇಬ್ಬರೂ ನಟರ ಚೊಚ್ಚಲ ಚಿತ್ರವಾಗಿತ್ತು. ಅಭಿನಯ್ ತಮ್ಮ ವೃತ್ತಿಜೀವನದ ಅವಧಿಯಲ್ಲಿ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರ ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತಿದ್ದಂತೆ, ಅಭಿನಯ್ ಚಲನಚಿತ್ರೋದ್ಯಮಿಗಳು ಮತ್ತು ಸಾರ್ವಜನಿಕರಿಂದ ಆರ್ಥಿಕ ಸಹಾಯವನ್ನು ಕೋರಿದರು. ಹಾಸ್ಯನಟ ಕೆಪಿವೈ ಬಾಲಾ ಅವರ ಮನವಿಗೆ ಸ್ಪಂದಿಸಿ ಆರ್ಥಿಕ ನೆರವು ನೀಡಿದರು.



