Connect with us

LATEST NEWS

ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೇಲೆ ತಲವಾರು ದಾಳಿ

ಮಂಗಳೂರು ಫೆಬ್ರವರಿ 10: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಜ್ ಮೇಲೆ ತಲವಾರು ದಾಳಿ ನಡೆದಿದೆ. ಕಾಟಿಪಳ್ಳ ಸೆಕೆಂಡ್ ಕ್ರಾಸ್ ನಲ್ಲಿ ಈ ಘಟನೆ ನಡೆದಿದ್ದು ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆ.


ಮಂಗಳೂರು ಹೊರವಲಯದ ಸುರತ್ಕಲ್​ನ ಕಾಟಿಪಳ್ಳ ಸೆಕೆಂಡ್ ಬ್ಲಾಕ್ ಬಳಿ ಈ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ನವಾಜ್​ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬಂದಿದ್ದ ಆರು ಜನರ ತಂಡ ಈ ದಾಳಿ ನಡೆಸಿ ಪರಾರಿಯಾಗಿದ್ದು, ಸುರತ್ಕಲ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.


ದಾಳಿ ಮಾಡಿದವನನ್ನು ಶಾಕಿಬ್ ಯಾನೆ ಶಬ್ಬು ಎಂದು ಗುರುತಿಸಲಾಗಿದ್ದು ಸರಗಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಹಾಡುಹಗಲೇ ಕಾಟಿಪಳ್ಳ ಪೇಟೆಯ ಬಳಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ನಡೆದಿತ್ತು. ಅದರಲ್ಲಿ ಪಿಂಕಿ ನವಾಜ್ ಸೇರಿ ನಾಲ್ವರು ಆರೋಪಿಗಳಿದ್ದರು.