Connect with us

    LATEST NEWS

    ತಾಲಿಬಾನ್ ಪಡೆಗಳ ದಾಳಿಗೆ ಪಂಜ್ ಶೀರ್ ರೆಸಿಸ್ಟೆನ್ಸ್ ಫೋರ್ಸ್ ವಕ್ತಾರ ಸಾವು

    ಕಾಬೂಲ್: ತಾಲಿಬಾನ್ ಗಳಿಗೆ ಸಂಪೂರ್ಣ ಅಪ್ಘಾನಿಸ್ತಾನ ವಶಕ್ಕೆ ಎದುರಾಗಿ ನಿಂತಿರಿವ ಪಂಜ್ ಶೀರ್ ನ ರೆಸಿಸ್ಟೆನ್ಸ್ ಫೋರ್ಸ್ ಪಡೆಗಳ ನಡುವಿನ ಘರ್ಷಣೆ ಮುಂದುವರೆದಿದ್ದು, ಇತ್ತ ತಾಲಿಬಾನ್ ಪಡೆಗಳ ದಾಳಿಯಲ್ಲಿ ರೆಸಿಸ್ಟೆನ್ಸ್ ಫೋರ್ಸ್ ವಕ್ತಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ಈ ನಡುವೆ ತಾಲಿಬಾನಿಗಳು ಪಂಜ್ ಶೀರ್ ತೊರೆದೆ ಶಾಂತಿ ತುಕತೆ ಸಿದ್ದ ಎಂದು ಪ್ರತಿರೋಧ ಪಡೆಗಳ ನಾಯಕ ಅಹ್ಮದ್ ಮಸೂದ್ ಹೇಳಿದ್ದಾರೆ.

    ಪ್ರತಿರೋಧ ವಕ್ತಾರರ ಸಾವನ್ನು ಅಫಘಾನ್ ಸುದ್ದಿ ಸಂಸ್ಥೆ ಖಾಮಾ ಪ್ರೆಸ್ ಇಂದು ವರದಿ ಮಾಡಿದ್ದು, ಪಂಜಶೀರ್ ಪ್ರತಿರೋಧದ ವಕ್ತಾರ ಫಾಹೀಮ್ ದುಷ್ಟಿಯು ತಾಲಿಬಾನ್ ಜೊತೆಗಿನ ಯುದ್ಧದಲ್ಲಿ ಗಳಲ್ಲಿ ನಿಧನರಾದರು” ಎಂದು ಹೇಳಲಾಗಿದೆ.
    ದಬ್ಬಾಳಿಕೆ ಮತ್ತು ಆಕ್ರಮಣಶೀಲತೆಯ ವಿರುದ್ಧದ ಪವಿತ್ರ ಪ್ರತಿರೋಧದಲ್ಲಿ ಇಬ್ಬರು ಸಹಚರರನ್ನು ಕಳೆದುಕೊಳ್ಳಲಾಗಿದೆ. ಫಾಹಿಮ್ ದಷ್ಟಿ, ಎನ್ ಆರ್ ಎಫ್ ವಕ್ತಾರ ಮತ್ತು ಜನರಲ್ ಅಬ್ದುಲ್ ವೂಡೋಡ್ ಜಾರಾ ಹುತಾತ್ಮರಾದರು. ಅವರ ಸ್ಮರಣೆ ಶಾಶ್ವತವಾಗಿರಲಿ!” ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಟ್ವೀಟ್ ತಿಳಿಸಿದೆ.


    ಇನ್ನು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ವಕ್ತಾರ ಫಾಹೀಮ್ ದಷ್ಟಿ ಸಾವಿನ ಬೆನ್ನಲ್ಲೇ ಪಂಜಶೀರ್ ತೊರೆದರೆ ತಾಲಿಬಾನ್ ಜತೆ ಮಾತುಕತೆಗೆ ಸಿದ್ಧ ಎಂದು ಪ್ರತಿರೋಧ ಪಡೆಗಳ ನಾಯಕ ಅಹ್ಮದ್ ಮಸೂದ್ ಹೇಳಿದ್ದಾರೆ.
    ತಾಲಿಬಾನ್ ಸಂಘಟನೆಯು ಪಂಜಶೀರ್ ಪ್ರಾಂತ್ಯವನ್ನು ತೊರೆದರೆ ಹೋರಾಟವನ್ನು ನಿಲ್ಲಿಸಲು ಮತ್ತು ಮಾತುಕತೆ ಆರಂಭಿಸಲು ಸಿದ್ಧ. ಪಂಜಶೀರ್ ಮತ್ತು ಅಂದರಬ್ ನಲ್ಲಿ ತಾಲಿಬಾನ್ ತಮ್ಮ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಿದರೆ ಶಾಶ್ವತ ಶಾಂತಿಯನ್ನು ಸಾಧಿಸಲು ಯುದ್ಧವನ್ನು ತಕ್ಷಣವೇ ನಿಲ್ಲಿಸಲು ರಾಷ್ಟ್ರೀಯ ಪ್ರತಿರೋಧ ಪಡೆಗಳು ಸಿದ್ಧವಾಗಿವೆ, ಮತ್ತು ತಜ್ಞರು ಹಾಗೂ ಸುಧಾರಕರೊಂದಿಗೆ ಬೃಹತ್ ಸಭೆ ನಡೆಸಲು, ಮಾತುಕತೆಗಳನ್ನು ಮುಂದುವರಿಸಲು ಆಶಿಸುತ್ತೇವೆ,” ಎಂದು ಭಾನುವಾರ ಮಸೂದ್ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply