LATEST NEWS
ಉಡುಪಿ ಡ್ರಗ್ಸ್ ಜಾಲ – ಮಣಿಪಾಲ ವೈದ್ಯಕೀಯ ವಿಧ್ಯಾರ್ಥಿ ಸಹಿತ ಇಬ್ಬರ ಬಂಧನ
ಉಡುಪಿ ನವೆಂಬರ್ 1:- ಡ್ರಗ್ಸ್ ವಿರುದ್ದದ ಸಮರದಲ್ಲಿ ಉಡುಪಿ ಪೊಲೀಸರು ಮುಂಚೂಣಿಯಲ್ಲಿದ್ದು, ಡ್ರಗ್ಸ್ ವಿರುದ್ದದ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವಿಧ್ಯಾರ್ಥಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲದ ಅಪಾರ್ಟ್ ಮೆಂಟೊಂದರ ನಿವಾಸಿ, ಕೆಎಂಸಿ ಮೆಡಿಕಲ್ ಕಾಲೇಜಿವ ವೈದ್ಯಕೀಯ ವಿಧ್ಯಾರ್ಥಿ ಆದಿತ್ಯ ಪ್ರಭು ಹಾಗೂ ಅಮೆರಿಕಾ ಮೂಲದ ಅನಿವಾಸಿ ಭಾರತೀಯ ವಿದ್ಯಾರ್ಥಿ ಅನಿಶ್ ರಾಜನ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 3.89 ಲಕ್ಷ ಮೌಲ್ಯದ 32 ಗ್ರಾಂ ವಿದೇಶಿ ಹೈಡ್ರೋವಿಡ್ ಗಾಂಜಾ ಹಾಗೂ 9 ಗ್ರಾಂ ಬ್ರೌನ್ ಶುಗರ್ 25 ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಕಳೆದ 1 ತಿಂಗಳಿನಿಂದ ಈಚೆಗೆ ಉಡುಪಿ ಪೊಲೀಸರು ವಶಪಡಿಸಿಕೊಳ್ಳುತ್ತಿರುವ ಸಿಂಥೆಟಿಕ್ ಡ್ರಗ್ಸ್ 4ನೇ ಪ್ರಕರಣ ಇದಾಗಿದೆ.
You must be logged in to post a comment Login