Connect with us

LATEST NEWS

ಉಡುಪಿ ಜಿಲ್ಲೆಯಲ್ಲೂ ಕೊರೋನಾ ವೈರಸ್ ಭೀತಿ..! ನಾಲ್ವರು ಜಿಲ್ಲಾಸ್ಪತ್ರೆಗೆ ದಾಖಲು

ಉಡುಪಿ ಜಿಲ್ಲೆಯಲ್ಲೂ ಕೊರೋನಾ ವೈರಸ್ ಭೀತಿ..! ನಾಲ್ವರು ಜಿಲ್ಲಾಸ್ಪತ್ರೆಗೆ ದಾಖಲು

ಉಡುಪಿ ಫೆಬ್ರವರಿ 8: ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಭಾರಿ ಕೊಲಾಹಲ ಎಬ್ಬಿಸಿರುವ ಕರೋನಾ ವೈರಸ್ ಈಗ ಕರಾವಳಿ ಜಿಲ್ಲೆ ಉಡುಪಿಯಲ್ಲೂ ಸದ್ದು ಮಾಡುತ್ತಿದೆ.ಕೇರಳದಲ್ಲಿ ಮೂರು ಕರೋನಾ ವೈರಸ್ ಪ್ರಕರಣ ಪತ್ತೆಯಾದ ಬಳಿಕ ಈಗ ಉಡುಪಿ ಜಿಲ್ಲೆಯಲ್ಲಿ ಶಂಕಿತ ಕರೋನಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ನಾಲ್ವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಚೀನಕ್ಕೆ ತೆರಳಿ 15 ದಿನಗಳ ಹಿಂದೆ ಸ್ವದೇಶಕ್ಕೆ ಮರಳಿದ ಜಿಲ್ಲೆಯ ಒಟ್ಟು ನಾಲ್ಕು ಮಂದಿಯನ್ನು ಸಂಶಯಾಸ್ಪದ ಕೊರೊನಾ ವೈರಸ್‌ಗೆ ಪರೀಕ್ಷೆಗೊಳಪಡಿಸಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇವರಲ್ಲಿ ಒಬ್ಬರು ಕಾಪು ತಾಲೂಕಿನವರಾಗಿದ್ದು 15 ದಿನಗಳ ಹಿಂದೆ ಚೀನಾದಿಂದ ಮರಳಿ ಬಂದಿದ್ದರು. ಅವರು ಶೀತ ಹಾಗೂ ಗಂಟಲು ಸೋಂಕಿ ಗಾಗಿ ಚಿಕಿತ್ಸೆಗೆ ಬಂದಿದ್ದರೆ, ಮತ್ತೆ ಮೂವರು -ಗಂಡ, ಹೆಂಡತಿ, ಮಗು- ಬ್ರಹ್ಮಾವರ ತಾಲೂಕಿನವರಾಗಿದ್ದು ಇವರು ಸಹ ಎರಡು ವಾರಗಳ ಹಿಂದೆ ಚೀನದಿಂದ ಮರಳಿದ್ದರು. ಇವರಲ್ಲಿ ಗಂಡನಲ್ಲಿ ಶೀತ-ಕೆಮ್ಮು ಇದ್ದರೆ, ಮಗುವಿನಲ್ಲಿ ಸಹ ಲಘು ಶೀತವಿದೆ. ಆದರೆ ಹೆಂಡತಿ ಆರೋಗ್ಯವಂತರಾಗಿದ್ದಾರೆ.

ಇದೀಗ ಈ ನಾಲ್ವರನ್ನು ಪ್ರತ್ಯೇಕ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ರಕ್ತ ಹಾಗೂ ಗಂಟಲಿನ ದ್ರವವನ್ನು ಕೊರೊನಾ ವೈರಸ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. ಇದು ಸಾಮಾನ್ಯ ಶೀತ ಕೆಮ್ಮು ಆಗಿದ್ದು, ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತೀವ್ರ ನಿಗಾದಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

Facebook Comments

comments