Connect with us

LATEST NEWS

ಸುರತ್ಕಲ್ : ಸಂಪೂರ್ಣ ಹದಗೆಟ್ಟ ಕಾನ – ತೋಕೂರು MSEZ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ರಸ್ತೆ ತಡೆ ಪ್ರತಿಭಟನೆ

ಸುರತ್ಕಲ್ ನವೆಂಬರ್ 09: ಕಾನ-ತೋಕೂರು ಎಂಎಸ್ಐಝೆಡ್ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ರಸ್ತೆ ಗುಂಡಿ ಮುಚ್ಚದೆ ನಿರ್ಲಕ್ಷ ಮಾಡುತ್ತಿರುವ MRPL ಮತ್ತು MSEZ ಸಂಸ್ಥೆಗಳ ಬೇಜವಾಬ್ದಾರಿತನವನ್ನು ವಿರೋಧಿಸಿ ಇಂದು ಕಾನ- ತೋಕೂರು ಆಟೋರಿಕ್ಷಾ ಚಾಲಕರ ಸಂಘ (CITU) ಮತ್ತು DYFI ಸುರತ್ಕಲ್ ಘಟಕದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು.


ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಝ್ ಅವರು ಮಂಗಳೂರಲ್ಲಿ ತೈಲಾಗಾರ, ವಿಶೇಷ ಆರ್ಥಿಕ ವಲಯ ಬಂದರೆ ಗ್ರಾಮ ಮತ್ತು ಮಂಗಳೂರು ನಗರ ಅಭಿವೃದ್ಧಿ ಆಗುತ್ತದೆ ಎಂದು ನೆಲ ಜಲ ಮತ್ತು ಭಾವನಾತ್ಮಕ ಸಂಬಂಧಗಳನ್ನು ತ್ಯಾಗ ಮಾಡಿದ ಜನರಿಗೆ ದಮ್ಮು ಕೆಮ್ಮು ರೋಗಗಳನ್ನು ಕೊಟ್ಟಿದ್ದು ಬಿಟ್ಟರೆ ಕನಿಷ್ಠ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗದ MRPL ಮತ್ತು MSEZ ಮಂಗಳೂರಿಗೆ ಒಂದು ಶಾಪದಂತೆ ಜನರ ಪ್ರಾಣದ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕಾನ ತೋಕೂರು ರಸ್ತೆಯ ಬ್ರಹತ್ ಗುಂಡಿಗಳಿಂದಾಗಿ ದ್ವಿಚಕ್ರ ಸವಾರರು ದಿನ ನಿತ್ಯ ಆಫಘಾತಕ್ಕೊಳಗಾಗಿ ಸಾವು ನೋವು ಸಂಭವಿಸುತ್ತಿದೆ MRPL ಮತ್ತು MSEZ ಕೈಗಾರಿಕೆಗಳಿಗೆ ಬರುವ ಬೃಹತ್ ಲಾರಿಗಳು ಓಡಾಡುತ್ತಿರುವುದರಿಂದ ರಸ್ತೆ ಹಾಳಾಗಿ ಹೊಂಡ ಗುಂಡಿಗಳಿಂದ ತುಂಬಿ ಹೋಗಿದೆ ಮುಂದಿನ ಹದಿನೈದು ದಿನಗಳಲ್ಲಿ ರಸ್ತೆ ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಕೈಗಾರಿಕೆಗಳಿಗೆ ಬರುವ ಎಲ್ಲಾ ವಾಹನಗಳನ್ನು ತಡೆದು ತೀವ್ರ ರೀತಿಯ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Share Information
Advertisement
Click to comment

You must be logged in to post a comment Login

Leave a Reply