Connect with us

    DAKSHINA KANNADA

    ಶಬರಿಮಲೆಗೆ ಸ್ತ್ರೀ ಪ್ರವೇಶ ವಿವಾದ, ತೀರ್ಪು ಮುಂದೂಡಿದ ಸುಪ್ರೀಂಕೋರ್ಟ್

    ಶಬರಿಮಲೆಗೆ ಸ್ತ್ರೀ ಪ್ರವೇಶ ವಿವಾದ, ತೀರ್ಪು ಮುಂದೂಡಿದ ಸುಪ್ರೀಂಕೋರ್ಟ್

    ಮಂಗಳೂರು,ನವಂಬರ್ 14: ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಶಬರಿಮಲೆಗೆ ಸ್ತ್ರೀ ಪ್ರವೇಶ ಕುರಿತಂತೆ ಸುಪ್ರೀಕೋರ್ಟ್ ತೀರ್ಪು ಮತ್ತೆ ಮುಂದೂಡಲಾಗಿದೆ.

    ಕೇರಳದ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶಕ್ಕೂ ಅವಕಾಶ ನೀಡಬೇಕು ಎನ್ನುವ ತನ್ನದೇ ತೀರ್ಪಿಗೆ ನೀಡಲಾಗಿದ್ದ ಮೇಲ್ಮನವಿಯ ಪರಿಶೀಲನೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿತ್ತು.

    ಮೇಲ್ಮನವಿಯನ್ನು ಆಲಿಸಿದ ಸುಪ್ರೀಕೋರ್ಟ್ ಈ ಪ್ರಕರಣವನ್ನು 7 ಸದಸ್ಯರಿರುವ ನ್ಯಾಯಾಪೀಠಕ್ಕೆ ವರ್ಗಾಯಿಸಿದೆ.

    ಮುಂದಿನ ವಿಚಾರಣೆಯನ್ನು ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಲಿರುವ ಪೀಠ ನಡೆಸಲಿದೆ.

    ಅಯ್ಯಪ್ಪ ಸ್ವಾಮಿಯನ್ನು ಬ್ರಹ್ಮಚಾರಿಯಾರಿಯಾಗಿ ಪೂಜಿಸಲ್ಪಡುತ್ತಿರುವ ಶಬರಿಮಲೆಗೆ 10 ವರ್ಷ ಮೇಲ್ಪಟ್ಟ ಹಾಗೂ 50 ವರ್ಷ ಕೆಳಗಿನಮಹಿಳೆಯರು ಪ್ರವೇಶಿಸುವಂತಿಲ್ಲ ಎನ್ನುವ ಕಟ್ಟುಪಾಡು ಹಿಂದಿನಿಂದಲೇ ಕ್ಷೇತ್ರದಲ್ಲಿ ನಡೆದುಕೊಂಡು ಬಂದಿದೆ.

    ಈ ನಡುವೆ ಮಹಿಳೆಯರಿಗೂ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವ ಕೆಲವು ಪ್ರಗತಿಪರ ಮಹಿಳಾ ಸಂಘಟನೆಗಳ ಮನವಿ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿತ್ತು.

    ಈ ವಿಚಾರವಾಗಿ ಕೇರಳದಲ್ಲಿ ಭಾರಿ ಪ್ರತಿಭಟನೆಗಳೂ ನಡೆದಿದ್ದವು. ಭಕ್ತರ ಹಾಗೂ ಪೋಲೀಸರ ನಡುವೆ ಸಂಘರ್ಷವೂ ಏರ್ಪಟ್ಟಿತ್ತು.

    ಈ ನಡುವೆ ಬಿಂದು ಮತ್ತು ಕನಕವಲ್ಲಿ ಎನ್ನುವ ಮಹಿಳೆಯರು ಕೇರಳ ಪೋಲೀಸರ ಸರ್ಪಗಾವಲಿನಲ್ಲಿ ಶಬರಿಮಲೆ ಸನ್ನಿಧಾನಕ್ಕೆ ಪ್ರವೇಶಿಸಿದ್ದರು.

    ಇದರಿಂದ ಕೆರಳಿದ ಕ್ಷೇತ್ರದ ಮುಖ್ಯ ತಂತ್ರಿಗಳು ಮಹಿಳೆಯರ ಪ್ರವೇಶದ ಬಳಿಕ ಸನ್ನಿಧಾನ ಮಲಿನವಾಗಿದ್ದು, ಶುದ್ಧೀಕರಣ ಹೋಮ ನಡೆಸಿದ್ದರು.

    ನವಂಬರ್ 16 ರಿಂದ ಮತ್ತೆ ಸನ್ನಿಧಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಹಿಳೆಯರ ಪ್ರವೇಶ ವಿಚಾರ ಮತ್ತೆ ಗೊಂದಲಕ್ಕೆ ಕಾರಣವಾಗುವ ಸಾಧ್ಯತೆಯೂ ಹೆಚ್ಚಾಗಿದೆ.

    ಈ ಗೊಂದಲದ ನಡುವೆ ಕ್ಷೇತ್ರಕ್ಕೆ ಉಗ್ರರ ಭೀತಿಯೂ ಇರುವ ಕಾರಣಕ್ಕಾಗಿ ಕ್ಷೇತ್ರದ ಸುತ್ತಮುತ್ತ ಭಾರೀ ಪೋಲೀಸ್ ಸರ್ಪಗಾವಲನ್ನು ಹಾಕಲು ಕೇರಳ ಸರಕಾರ ತೀರ್ಮಾನಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply