ಭಾನುವಾರ ಸಂಪೂರ್ಣ ಲಾಕ್ಡೌನ್ ಆದರೆ ಮದುವೆಗಳಿಗೆ ಅಡ್ಡಿ ಇಲ್ಲ – ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಮೇ.23: ರಾಜ್ಯದಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರಲಿದೆ ಎಂದು ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ತಿಳಿಸಿದ್ದಾರೆ. ಭಾನುವಾರದಂದು ಎಲ್ಲಾ ರೀತಿಯ ಸೇವೆಗಳು ಬಂದ್‌ ಆಗಲಿದೆ.

ಜನರ ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಆದ್ರೆ ಮೊದಲೇ ನಿಶ್ಚಯವಾದ ಮದುವೆಗಳಿಗೆ ಅಡ್ಡಿ ಇಲ್ಲ, ರಿಯಾಯಿತಿಯನ್ನು ನೀಡಿದ್ದೇವೆ. ಹಾಲು, ಮೆಡಿಕಲ್ ಸೇವೆ ಸೇರಿದಂತೆ ಮೂಲಭೂತ ಅವಶ್ಯಕತೆಗಳಿಗೆ ವಿನಾಯತಿ ನೀಡಲಾಗಿದೆ ಎಂದು ಕೋಟಾ ಶ್ರೀನಿವಾಸ್‌ಪೂಜಾರಿ ತಿಳಿಸಿದ್ದಾರೆ.