LATEST NEWS
ದಕ್ಷಿಣಕನ್ನಡ ಜಿಲ್ಲೆ ಸಂಪೂರ್ಣ ಬಂದ್…!!
ದಕ್ಷಿಣಕನ್ನಡ ಜಿಲ್ಲೆ ಸಂಪೂರ್ಣ ಬಂದ್…!!
ಮಂಗಳೂರು ಮೇ.24: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಇಂದು ರಾಜ್ಯದಾದ್ಯಂತ ಸಂಪೂರ್ಣ ಬಂದ್ ಆದೇಶ ಹೊರಡಿಸಲಾಗಿದೆ. ಪ್ರತೀ ಭಾನುವಾರ ಸಂಪೂರ್ಣ ಬಂದ್ ಜಾರಿಗೆ ತರಲು ರಾಜ್ಯ ಸರಕಾರ ಆದೇಶ ಹೊರಡಿಸಿದ ಬಳಿಕದ ಮೊದಲ ಭಾನುವಾರ ಇದಾಗಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲಾ ವಹಿವಾಟುಗಳೂ ಸಂಪೂರ್ಣ ಬಂದ್ ಆಗಿದೆ.
ಪುತ್ತೂರು ಪೇಟೆ ಬಂದ್ ಆಗಿದ್ದು, ಕೆಲವೇ ತರಕಾರಿ ಹಾಗೂ ಮಾಂಸದ ಅಂಗಡಿಗಳು ತೆರೆದಿವೆ. ಆದರೆ ಜನಸಂಚಾರ ಮಾತ್ರ ಇಲ್ಲದ ಕಾರಣ ತೆರೆದ ಅಂಗಡಿಗಳೂ ಭಿಕೋ ಎನ್ನುತ್ತಿವೆ. ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಪೋಲೀಸರು ಕಠಿಣ ಕ್ರಮ ಸೂಚನೆಯನ್ನು ಈಗಾಗಲೇ ನೀಡಿದ್ದು, ನಿಯಮ ಮೀರಿ ಹೊರಗೆ ಬರುವವರ ವಿರುದ್ಧ ಪ್ರಕರಣ ದಾಖಲಿಸಲೂ ಮುಂದಾಗಿದೆ. ಮುಸ್ಲಿಮರ ಪವಿತ್ರ ಹಬ್ಬ ಈದ್ ಫಿತ್ರ್ ಕೂಡಾ ಇಂದೇ ಆಚರಣೆಯಾಗುತ್ತಿದ್ದು, ತುಂಬಿ ತುಳುಕುತ್ತಿದ್ದ ಮಸೀದಿಗಳು ಖಾಲಿ ಖಾಲಿಯಾಗಿವೆ. ಅಗತ್ಯ ವಸ್ತುಗಳ ಅಂಗಡಿಗಳೂ ಸ್ವಯಂಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡಿವೆ.