ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದ ಮಗನ ಮೇಲೆ ಸುಮೋಟೋ ಕೇಸ್ ದಾಖಲು – ಡಿಸಿಪಿ ಅಣ್ಣಾಮಲೈ

ಬೆಂಗಳೂರು ಡಿಸೆಂಬರ್ 9: ಹೆತ್ತಮ್ಮನಿಗೆ ಹೊರಕೆಯಲ್ಲಿ ಹೊಡೆದ ಮಗನ ವಿರುದ್ದ ಸುಮೋಟೋ ಕೇಸ್ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

ಬುದ್ಧಿವಾದ ಹೇಳಿದ್ದಕ್ಕೆ ಮಗನೊಬ್ಬ ತನ್ನ ಹೆತ್ತಮ್ಮನಿಗೆ ಪೊರಕೆಯಿಂದ ಹೊಡೆದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜೀವನ್(19) ತಾಯಿಗೆ ಥಳಿಸಿದ ಮಗ. ಬುದ್ಧಿವಾದ ಹೇಳಿದ್ದಕ್ಕೆ ಜೀವನ್ ತನ್ನ ತಾಯಿಗೆ ಪೊರಕೆಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡಿದ್ದಾನೆ. ಅಲ್ಲದೇ ಹೊರಗಡೆ ನನ್ನ ವಿಚಾರ ಮಾತಾಡಿದರೆ, ಇದೇ ರೀತಿ ಟ್ರೀಟ್‍ಮೆಂಟ್ ಇರುತ್ತೆ ಎಂದು ಜೀವನ್ ತಾಯಿಗೆ ಧಮ್ಕಿ ಹಾಕಿದ್ದಾನೆ.

ಈ ಮೊದಲು ಜೀವನ್ ತಾಯಿಯ ಬಳಿ ಮಾತನಾಡಿ ಅವರಿಗೆ ಹಲ್ಲೆಯಿಂದ ಎನಾದರೂ ಗಾಯವಾಗಿದೆಯೆ ಎಂದು ಪರಿಶೀಲಿಸಿ ನಂತರ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಡಿಸಿಪಿ ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ತಾಯಿಯೇ ದೂರು ನೀಡಬೇಕಾಗುತ್ತೆ. ಆದರೆ ಸ್ವಂತ ಮಗನ ವಿರುದ್ಧ ಏಕೆ ದೂರು ನೀಡಬೇಕು ಎಂದು ತಾಯಿ ಹಿಂಜರಿಯುತ್ತಾರೆ. ಕುಟುಂಬದವರು ಯಾರೂ ದೂರು ನೀಡದ ಕಾರಣ ನಾವೇ ಸ್ವತಃ ದೂರು ದಾಖಲಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

VIDEO

Facebook Comments

comments