Connect with us

DAKSHINA KANNADA

ಪಾದಚಾರಿಗೆ ಡಿಕ್ಕಿ ಹೊಡೆದ ಕಾರು – ಸ್ಥಳದಲ್ಲೇ ಸಾವನಪ್ಪಿದ ಪಾದಚಾರಿ

ಪಾದಚಾರಿಗೆ ಡಿಕ್ಕಿ ಹೊಡೆದ ಕಾರು – ಸ್ಥಳದಲ್ಲೇ ಸಾವನಪ್ಪಿದ ಪಾದಚಾರಿ

ಸುಳ್ಯ ಜೂ. 01: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಸುಳ್ಯದ ತಾಲೂಕಿನ, ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.


ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಆಗಮಿಸುತ್ತಿದ್ದ ಅಡ್ಕಾರಿನ ವ್ಯಕ್ತಿಯೋರ್ವರಿಗೆ ಸೇರಿದ ಹ್ಯುಂಡೈ ಕ್ರೆಟಾ ಕಾರು ಅರಂತೋಡು ಸಮೀಪದ ಬಿಳಿಯಾರು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಅಪರಿಚಿತ ಪಾದಚಾರಿಯು ರಸ್ತೆಯನ್ನು ದಾಟಿದ್ದಾರೆ ಎನ್ನಲಾಗಿದೆ. ಮಳೆ ಬರುತ್ತಿದ್ದುದರಿಂದ ಕಾರು ನಿಯಂತ್ರಣಕ್ಕೆ ಬಾರದೆ ಪಾದಚಾರಿಗೆ ಡಿಕ್ಕಿ ಹೊಡೆದು ರಸ್ತೆಯ ಪಕ್ಕದ ದಿಣ್ಣೆಯ ಮೇಲೆ ತಿರುಗಿ ನಿಂತಿದೆ.

 

ತಕ್ಷಣವೇ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Facebook Comments

comments