ಸುಳ್ಯ, ಡಿಸೆಂಬರ್ 25: ಬಾವಿಗೆ ಬಿದ್ದ ಮಹಿಳೆಯನ್ನು ಆಟೋ ಚಾಲಕ ರಕ್ಷಣೆ ಮಾಡಿದ ಘಟನೆ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೈಪಡಕ ಎಂಬಲ್ಲಿ ನಡೆದಿದೆ.

ಡಿಸೆಂಬರ್ 23ರಂದು ಮಹಿಳೆಯೊಬ್ಬರು ಕೈಪಡ್ಕದಲ್ಲಿ ಬಾವಿಗೆ ಬಿದ್ದರು. ಆಗ ಆ ರಸ್ತೆಯಾಗಿ ರಿಕ್ಷಾ ಚಾಲನೆ ಮಾಡಿಕೊಂಡು ಬಂದ ಗುರುಪ್ರಕಾಶ್ ಅವರಿಗೆ ವಿಷಯ ತಿಳಿದು ತತ್‌ಕ್ಷಣ ಬಾವಿಗೆ ಹಾರಿ, ಇತರರ ಸಹಕಾರದಿಂದ ಮಹಿಳೆಯನ್ನು ಮೇಲಕ್ಕೆತ್ತಿದರು. ಆ ಬಳಿಕ ಮಹಿಳೆಯನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತು.
ನಂತರ ಮಹಿಳೆಯನ್ನು ಚಿಕಿತ್ಸೆಗಾಗಿ ಸುಳ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಗುರುಪ್ರಕಾಶ್ ಅವರ ಸಕಾಲಿಕ ಮತ್ತು ಧೈರ್ಯಶಾಲಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



