Connect with us

    DAKSHINA KANNADA

    ಸುಳ್ಯ – ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವಿಧ್ಯಾರ್ಥಿನಿಯರ ಮೇಲೆ ಹರಿದ ಕಾರು- ಮೂವರಿಗೆ ಗಂಭೀರ ಗಾಯ

    ಸುಳ್ಯ ಜೂನ್ 01: ಕಾಲೇಜು ಬಿಟ್ಟು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿಧ್ಯಾರ್ಥಿನಿಯರಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ವಲ್ಲೀಶ ಸಭಾಭವನದ ಸಮೀಪ ನಡೆದಿದ್ದು, ಘಟನೆಯಲ್ಲಿ ಮೂವರು ವಿಧ್ಯಾರ್ಥಿನಿಯರಿಗೆ ಗಂಭೀರ ಗಾಯವಾಗಿದೆ.


    ಕಾಲೇಜು ಮುಗಿದ ಬಳಿಕ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ 7 ರಿಂದ 8 ವಿದ್ಯಾರ್ಥಿಗಳ ಮೇಲೆ ವಲ್ಲೀಶ ಸಭಾಭವನದಲ್ಲಿ ಎದುರು ಭಾಗ, ಕಾಲೇಜು ತಿರುವಿನ ಸ್ವಲ್ಪ ಮುಂಭಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

    ಈ ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದು ಅವರನ್ನು ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರಿಗೆ ಕರೆದೊಯ್ಯಲಾಗಿದ್ದು, ಇನ್ನುಳಿದ 3-4 ವಿದ್ಯಾರ್ಥಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಕಾರನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply