ಸುಳ್ಯ ನವೆಂಬರ್ 17: ಏಕಾಏಕಿ ಕಾಡುಹಂದಿಯೊಂದು ರಸ್ತೆಗೆ ಅಡ್ಡ ಬಂದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸುಳ್ಯ ಬಂದಡ್ಕ ಅಂತಾರಾಜ್ಯ ರಸ್ತೆಯ ಕೋಲ್ಚಾರಿನ ಕಣಕ್ಕೂರು ಸಮೀಪ ರವಿವಾರ ಸಂಭವಿಸಿದೆ.

ಸುಳ್ಯದಿಂದ ಕೇರಳದ ಬಂದಡ್ಕ ಕಡೆಗೆ ಕಾರು ಸಂಚರಿಸುತ್ತಿದ್ದ ವೇಳೆ ಬೆಳಗ್ಗಿನ ಜಾವ ಕಾಡು ಹಂದಿಯೊಂದು ಏಕಾಏಕಿ ಅಡ್ಡ ಬಂದಿದ್ದು, ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯಿಂದ ಮೋರಿಯ ಕೆಳಗೆ ಉರುಳಿದೆ. ಕಾರಿನಲ್ಲಿ ಚಾಲಕ ಒಬ್ಬರೇ ಇದ್ದು, ಸಣ್ಣ ಪುಟ್ಟಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ.



