DAKSHINA KANNADA
ಪುತ್ತೂರು ನೆಲ್ಲಿಕಟ್ಟೆ ಬಳಿ ಯುವಕ ಮನೆ ಪಕ್ಕಾಸಿಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
ಪುತ್ತೂರು ಮಾರ್ಚ್ 13: ಯುವಕನೊಬ್ಬ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲ್ಲಿಕಟ್ಟೆ ಬ್ರಹ್ಮನಗರದಲ್ಲಿ ನಡೆದಿದೆ
ನೆಲ್ಲಿಕಟ್ಟೆ ಬ್ರಹ್ಮನಗರ ಗುರುವಮ್ಮ ಎಂಬವರ ಪುತ್ರ ಪ್ರಕಾಶ್ ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಪ್ರಕಾಶ್ ಅವರು ಕ್ಯಾಂಪ್ಕೋದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಂಜೆ ಮನೆಗೆ ಬಂದವರು ಮನೆಯೊಳಗೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂದಿಸಿ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್ ಐ ಜಂಬೂರಾಜ್ ಮಹಾಜನ್ ಸಿಬ್ಬಂದಿಗಳು ಆಗಮಿಸಿದ್ದಾರೆ. ಮೃತರು ತಾಯಿ ಗುರುವಮ್ಮ ಮತ್ತು ಸಹೋದರನನ್ನು ಅಗಲಿದ್ದಾರೆ.ಪುತ್ತೂರಿನ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.