Connect with us

LATEST NEWS

ರಾಜೀವ್ ಗಾಂಧಿ ವಿವಿಯಿಂದ ದಿಢೀರ್ ಪರೀಕ್ಷೆ ಗೊಂದಲದಲ್ಲಿ ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯ

ರಾಜೀವ್ ಗಾಂಧಿ ವಿವಿಯಿಂದ ದಿಢೀರ್ ಪರೀಕ್ಷೆ ಗೊಂದಲದಲ್ಲಿ ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯ

ಮಂಗಳೂರು ಸೆಪ್ಟೆಂಬರ್ 21: ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಬೇಜಾವಬ್ದಾರಿ ವರ್ತನೆಯಿಂದಾಗಿ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳು ಭವಿಷ್ಯ ಹಾಳಾಗುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಭಾರೀ ಮಳೆಯ ಕಾರಣಕ್ಕಾಗಿ ಮುಂದೂಡಲ್ಪಟ್ಟಿದ್ದ ವಿಶ್ವವಿದ್ಯಾಲಯದ ನಡೆಸುವ ಪರೀಕ್ಷೆಯನ್ನು ಇದೀಗ ದಿಢೀರನೆ ನಡೆಸಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ 23 ರಂದು ರಾಜ್ಯದಾದ್ಯಂತ ಎಲ್ಲಾ ಮೆಡಿಲಲ್ ಕಾಲೇಜುಗಳಿಗೆ ಪರೀಕ್ಷೆ ನಡೆಸುವ ನೋಟೀಸ್ ಜಾರಿ‌ ಮಾಡಲಾಗಿದ್ದು, ಕೇವಲ ಒಂದೇ ದಿನದ ಅಂತರದಲ್ಲಿ ಪರೀಕ್ಷೆಯ ವೇಳಾಪಟ್ಟಿ ಹೊರಡಿಸಿರೋದು ಸಾವಿರಾರು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ.

ಕೆಲವು ವಿದ್ಯಾರ್ಥಿಗಳು ಪರೀಕ್ಷೆಯ ಸಿದ್ಧತೆಯ ಹಿನ್ನಲೆಯಲ್ಲಿ ತಮ್ಮ ಊರುಗಳಿಗೂ ತೆರಳಿದ್ದು, ವಿಶ್ವವಿದ್ಯಾಲಯ ಹೊರಡಿಸಿದ ದಿಡೀರ್ ಪರೀಕ್ಷಾ ವೇಳಾಪಟ್ಟಿಯಿಂದ ಕಕ್ಕಾಬಿಕ್ಕಿಯಾಗಿದ್ದಾರೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಮಂಗಳೂರಿನ ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೀಗ ಊರಿಂದ ಮಂಗಳೂರು ತಲುಪುವುದು ಹೇಗೆ ಎನ್ನುವ ಆತಂಕದಲ್ಲೂ ಇದ್ದಾರೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಈ ಬೇಜಾವಾಬ್ದಾರಿ ವರ್ತನೆಯಿಂದಾಗಿ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯ‌ ತೂಗುಯ್ಯಾಲೆಯಲ್ಲಿರುವಂತಾಗಿದೆ.

Facebook Comments

comments