ಗಾಯಗೊಂಡ ಕಾಡಾನೆಯ ಮಟಾಶ್ ಮಾಡಲು ಸುಬ್ರಹ್ಮಣ್ಯ ಅರಣ್ಯ ವಲಯದ ಅಧಿಕಾರಿಗಳ ಸ್ಕೆಚ್

ಮಂಗಳೂರು ಮಿರರ್ Exclusive
ಮಂಗಳೂರು, ಮೇ 08: ಕಾಲಿಗೆ ಗಾಯ ಮಾಡಿಕೊಂಡಿರುವ ಕಾಡಾನೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳೇ ಸೇರಿ ಕೊಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ.

ಸುಳ್ಯ ತಾಲೂಕಿನ ಅರಣ್ಯಗಳ ಅಂಚಿನಲ್ಲಿರುವ ಕೊಲ್ಲಮೊಗ್ರುವಿನ ಅರಣ್ಯದಲ್ಲಿ ಈ ಆನೆ ಇದೀಗ ಕಾಲಿಗೆ ಗಾಯ ಮಾಡಿಕೊಂಡು ಬಿದ್ದುಕೊಂಡಿರುವ ಆನೆಯನ್ನು ಕಾಡಿನಲ್ಲೇ ಇಂಜೆಕ್ಷನ್ ನೀಡಿ ಮಟಾಶ್ ಮಾಡುವ ಪ್ಲಾನಿಂಗ್ ಈಗಾಗಲೇ ಸಿದ್ಧಗೊಂಡಿದೆ ಎನ್ನಲಾಗಿದೆ.

ಈ ಸಂಬಂಧ ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿಗಳು ಇಂದು (ಮೇ 08) ರಂದು ತನ್ನ ಸಿಬ್ಬಂದಿಗಳ ಜೊತೆಗೆ ಚರ್ಚೆ ನಡೆಸಿದ್ದು, ನಾಳೆ (ಮೇ 09) ರಂದು ಕೊಲ್ಲಮೊಗ್ರು ಕಾಡಿಗೆ ತೆರಳಿ ವಿಷಕಾರಿ ಚುಚ್ಚುಮದ್ದು ನೀಡುವ ಯೋಜನೆಯನ್ನು ರೂಪಿಸಲಾಗಿದೆ.

ಈ ವಿಚಾರ ಇದೀಗ ಅರಣ್ಯ ಇಲಾಖೆ ಮೂಲಗಳಿಂದಲೇ ತಿಳಿದು ಬಂದಿದ್ದು, ನಾಳೆ ಮಧ್ಯಾಹ್ನದ ವೇಳೆಗೆ ಈ ಅಪರೇಷನ್ ಎಲಿಫೆಂಟ್ ಮರ್ಡರ್ ನಡೆಯಲಿದೆ ಎನ್ನುವುದು ತಿಳಿದು ಬಂದಿದೆ.

ಆನೆ ಗಾಯಗೊಂಡು ಬಿದ್ದಿರುವ ವಿಚಾರವನ್ನು ಸ್ಥಳೀಯರು ಅರಣ್ಯ ಇಲಾಖೆಗೆ ಕಳೆದ ಮೂರು ದಿನಗಳ ಹಿಂದೆ ತಿಳಿಸಿದ್ದರು.

ಈ ಸಂಬಂಧ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ನೋಡಿ ಹೋಗಿದ್ದರು ಎನ್ನಲಾಗಿದೆ.

ಅರಣ್ಯ ಇಲಾಖೆಯ ಈ ನಿರ್ಧಾರ ಸ್ಥಳೀಯರನ್ನು ಕೆರಳಿಸಿದೆಯಾದರೂ, ಯಾರೂ ಕೂಡಾ ಅರಣ್ಯ ಇಲಾಖೆಯ ವೈರತ್ವ ಕಟ್ಟಿಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಸುಮ್ಮನಿರುವ ವಿಚಾರವೂ ತಿಳಿದು ಬಂದಿದೆ.