Connect with us

    DAKSHINA KANNADA

    ಮತ್ತೆ ವಿದ್ಯಾರ್ಥಿಗಳನ್ನು ಬಳಸಿ ಬಿಕ್ಷಾಟನೆಗೆ ಸಜ್ಜಾದ ಸಂತ ಅಲೋಶಿಯಸ್ ಕಾಲೇಜು

    ಮತ್ತೆ ವಿದ್ಯಾರ್ಥಿಗಳನ್ನು ಬಳಸಿ ಬಿಕ್ಷಾಟನೆಗೆ ಸಜ್ಜಾದ ಸಂತ ಅಲೋಶಿಯಸ್ ಕಾಲೇಜು

    ಮಂಗಳೂರು, ಜುಲೈ 21 : ಅಸಹಾಯಕರ ಬಾಳಿಗೆ ದಾರೀ ದೀಪವಾಗಲು ನೆರವು ಎನ್ನುವ ನೆಪದಲ್ಲಿ ಮತ್ತೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕೋಸ್ (cause) ಎನ್ನುವ ತಂಡ ಬಿಕ್ಷಾಟನೆಗೆ ಇಳಿದಿದೆ.

    ಕಳೆದ ಮೂರು ನಾಲ್ಕು ವರ್ಷಗಳಿಂದ ನಿರಂತರವಾಗಿ ಅಲೋಶಿಯಸ್ ಕಾಲೇಜು ತನ್ನ ವಿದ್ಯಾರ್ಥಿಗಳನ್ನು ಬಳಸಿಕೊಂಡು ಈ ರೀತಿಯಲ್ಲಿ ಬಿಕ್ಷಾಟನೆಗೆ ಇಳಿಯುತ್ತಿದೆ.

    ಕಾಲೇಜಿನ ಹದಿಹರೆಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ನೂರಾರು ಜನರು ಸೇರುವ ಮಾಲ್ ಗಳಲ್ಲಿ ನೃತ್ಯಮಾಡಿ ಕಾಸ್ ಸಂಗ್ರಹಿಸುವುದು  ಈ ಕೋಸ್ ನ ಉದ್ಧೇಶವಾಗಿದೆ.

    ಕಳೆದ ವರ್ಷವೂ ಈ ಸಂಸ್ಥೆಯು ತನ್ನ ಕಾಲೇಜಿನ ಪಿಯು ವಿದ್ಯಾರ್ಥಿಗಳನ್ನು ಬಲವಂತವಾಗಿ ಈ ಕಾರ್ಯಕ್ಕೆ ಇಳಿಸುವ ಮೂಲಕ ವಿದ್ಯಾರ್ಥಿಗಳ ಮೇಲೆ ಶೋಷಣೆ ಮಾಡಿತ್ತು. ಈ ಬಗ್ಗೆ ಕೆಲವು ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ವಿರುದ್ಧ ತಮ್ಮ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.

    ಇದೀಗ ಮತ್ತೆ ಬಿಕ್ಷಾಟನೆಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಅಲೋಶಿಯಸ್ ಕಾಲೇಜು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವೃ ಆಕ್ರೋಶಕ್ಕೂ ಕಾರಣವಾಗಿದೆ. ಇಲ್ಲಿ ಬಿಕ್ಷಾಟನೆ ಎಂಬ ಪದ ಬಳಸಿಕೊಳ್ಳಲೇ ಬೇಕಾಗುತ್ತದೆ.

    ಅಂದ ಹಾಗೆ ಈ ಕಾರ್ಯಕ್ರಮ ನಡೆಸಲು ಕೋಸ್ ಯೋಜನೆಗೆ ಬೆಂಗಾಲವಾಗಿ ನಿಂತಿರುವುದು ಕೋಟ್ಯಾಂತರ ರೂಪಾಯಿಯಲ್ಲಿ ವ್ಯವಹಾರ ನಡೆಸುತ್ತಿರುವ ಫೋರಂ ಫಿಜ್ಝಾ ಮಾಲ್, ಗೋಲ್ಡಪಿಂಜ್ ಗ್ರೂಪ್ ಹಾಗೂ ಇತರ ಮಲ್ಟಿ ಮಿಲಿಯನ್ ಕಂಪನಿಗಳು.

    ಇಂಥಹ ಕಂಪನಿಗಳು ತನ್ನ ಸಹೋದ್ಯೋಗಿಗಳಿಗೆ ದಿನವೊಂದಕ್ಕೆ ಬಳಸುವ ಚಾ-ಕಾಫಿ ಹಣ ಅಥವಾ ಅಲ್ಲಿಯ ಉದ್ಯೋಗಿಗಳ ಒಂದು ದಿನದ ಸಂಬಳ  ನೀಡಿದರೂ ಕೋಸ್ ನ ಕಾಸ್ ಸಂಗ್ರಹಿಸುವ  ಉದ್ಧೇಶ ಈಡೇರುತ್ತಿತ್ತು.

    ಆದರೆ ಇದನ್ನು ಬಿಟ್ಟು ಮಾಲ್ ಗಳಿಗೆ ಬೇಸಿಗೆ ಕಾಲದಲ್ಲಿ ತಣ್ಣಗಿನ ವಾತಾವರಣವನ್ನು ಅರಿಸಿ ಬರುವ, ಬೇಸಿಗೆ ಕಾಲದಲ್ಲಿ ಚಳಿ ಕಾಯಿಸಲು ಬರುವವರ ಮುಂದೆ ವಿದ್ಯಾರ್ಥಿಗಳನ್ನು ಕುಣಿಸಿದರೆ, ನಾಲ್ಕು ಶಿಳ್ಳೆ ಬಿಟ್ಟರೆ ಬೇರೇನೂ ಸಿಗೋದಿಲ್ಲ.

    ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮಗೆ ಇಷ್ಟವಿಲ್ಲದೆ , ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ಒತ್ತಡದಲ್ಲಿ ಪಾತ್ರೆ ಹಿಡಿದು ಜನರ ಎದುರು ಕೈಯೊಡ್ಡುತ್ತಿದ್ದರೆ, ಇನ್ನೊಂದು ಕಡೆ ಬಿಕ್ಷಾಟನೆಯ ಪಾತ್ರೆಯನ್ನು ಬದಿಗಿರಿಸಿ ತಮ್ಮ ಪಾಡಿಗೆ ತಾವಿರುತ್ತಿದ್ದರು.

    ಒಂದೆಡೆ ವಿದ್ಯಾರ್ಥಿಗಳು ಮಾಲ್ ಗಳಲ್ಲಿ ಸೇರಿದ ನೂರಾರು ಜನರು ಮುಂದೆ ಕುಣಿಯುತ್ತಿದ್ದರೆ, ಇನ್ನೊಂದೆಡೆ ಉಳಿದ ವಿದ್ಯಾರ್ಥಿಗಳು ಪಾತ್ರೆ ಹಿಡಿದು ಇದ್ದವರ ಬಳಿ ಮುಜುಗರದಿಂದ ಕೈಯೊಡ್ಡುತ್ತಿರುವುದು ಮಾಡುತ್ತಿರುವುದು ಕಂಡು ಬಂದಿದೆ.

    ಅಸಹಾಯಕರ ನೆರವಿಗೆ ಸ್ಪಂದಿಸಲು ಕಾಲೇಜ ಹೊಂದಿರು ಉದ್ಧೇಶ ಒಳ್ಳೆಯದಾಗಿದೆ.

    ಆದರೆ ಉದ್ದೇಶ ಈಡೆರಿಕೆಗೆ ಹಿಡಿದ ದಾರಿ ಸರಿಯಿಲ್ಲ.

    ಕಾಲೇಜಿನ ಈ  ವರ್ತನೆಯಿಂದ ಒಳ್ಳೆಯ ಉದ್ಧೇಶವೂ ಸಮಾಜಕ್ಕೆ ಕೆಟ್ಟದಾಗಿ ಕಂಡು ಬರುತ್ತದೆ.

    ಕಾಲೇಜಿನ ಹಳೆ ವಿದ್ಯಾರ್ಥಿಯೊಬ್ಬನ ಒತ್ತಾಯದ ಮೇರೆಗೆ ಈ ಕೋಸ್ ಆರಂಭಿಸಲಾಗಿದೆ.

    ಈ ಹಳೆ ವಿದ್ಯಾರ್ಥಿ ತನ್ನ ಸಹಪಾಟಿಗಳನ್ನು ಹಾಗು ತನ್ನ ಮನೆಯ ಸದಸ್ಯರನ್ನು ಈ ಕೋಸ್ ಉದ್ದೇಶಕ್ಕೆ ಬಳಸಿಕೊಳ್ಳಬಹುದಲ್ಲವೇ ಎನ್ನುವ ಪ್ರಶ್ನೆ ಕೇಳತೊಡಗಿದ್ದಾರೆ.

    ರಾಜಕೀಯ ಕಾರಣಕ್ಕಾಗಿ ತಾನೊಬ್ಬ ಸಮಾಜೋದ್ಧಾರಕನೆಂದು ಬಿಂಬಿಸಿಕೊಳ್ಳಲು  ಕಾಲೇಜಿಗೆ ವಿದ್ಯಾರ್ಜನೆಗೆ ಬರುವ ಮಕ್ಕಳನ್ನು  ಬಳಸಿಕೊಳ್ಳುವ ಬದಲು ಜನರ ಮುಂದೆ ತನ್ನ ಧಡೂತಿ ದೇಹ ವನ್ನು ಕುಣಿಸಬಹುದಲ್ಲವೇ? ಅದರಿಂದ ತನ್ನ ಕೋಸ್ ನ ಕಾಸ್ ಕೂಡ ಸಂಗ್ರಹ ವಾಗುತ್ತದೆ, ಜೇಬೂ ತುಂಬುತ್ತದೆ.

    ಅದಲ್ಲದೇ ತೂಕವೂ ಕಡಿಮೆಯಾಗುತ್ತದೆ.

    ಈ ಬಗ್ಗೆ ಒಮ್ಮೆ ಯೋಚಿಸಬೇಕಾಗಿದೆ.

    ಕೋಸ್ ಮುಗಿದ ಮೇಲೆ ನಡೆಯುವ ಅದ್ದೂರಿ ಪಾರ್ಟಿಗೆ ಯಾವ ಕಾಸ್ ಬಳಕೆ ಯಾಗುತ್ತಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply