ಪರೀಕ್ಷೆಯಲ್ಲಿ ಈ ವಿಧ್ಯಾರ್ಥಿ ಬರೆದ ಉತ್ತರ ನೋಡಿ ಬೆಚ್ಚಿ ಬಿದ್ದ ಶಿಕ್ಷಕರು

ಗದಗ ಮಾರ್ಚ್ 21: ಉತ್ತರ ಪತ್ರಿಕೆಯಲ್ಲಿ ಪಬ್ ಜಿ ಆಡುವ ಬಗ್ಗೆ ಬರೆಯಬೇಕಾದರೆ ಆ ಆಟ ಅದೆಷ್ಟು ಪ್ರಭಾವಿತವಾಗಿದೆ ಮತ್ತು ಯಾವ ರೀತಿ ದುಷ್ಪರಿಣಾಮ ಬೀರಿದೆ ಎಂಬುವುದಕ್ಕೆ ಒಂದು ಸಾಕ್ಷಿ ದೊರೆತಿದೆ.

ಗದಗದ ಪ್ರತಿಷ್ಟಿತ ಖಾಸಗಿ ಕಾಲೇಜೊಂದರಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯೊಬ್ಬ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ “ಪಬ್‌ ಜೀ’ ಆಟ ಆಡುವುದು ಹೇಗೆ ವಿವರಿಸಿ ಬರೆದು ಅಘಾತವನ್ನುಂಟು ಮಾಡಿದ್ದಾನೆ. ಉತ್ತರ ಪತ್ರಿಕೆಯ ತುಂಬೆಲ್ಲ ಪಬ್‌ಜೀ ಗೇಮ್‌ ಕಾರ್ಯವೈಖರಿ ಬಗ್ಗೆ ಬರೆದಿದ್ದಾನೆ.

ಕಂಪ್ಯೂಟರ್‌ ಸೈನ್ಸ್‌, ಅಕೌಂಟೆನ್ಸಿ, ಎಕನಾಮಿಕ್‌ ಆ್ಯಂಡ್‌ ಬಿಸಿನೆಸ್‌ ಸ್ಟಡಿಸ್‌ ವಿಷಯಗಳನ್ನು ಆಯ್ದು ಕೊಂಡ ಈ ವಿದ್ಯಾರ್ಥಿ ಗದಗದ ಖಾಸಾಗಿ ಕಾಲೇಜು ಒಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ. ಉತ್ತರ ಪತ್ರಿಕೆಯಲ್ಲಿ ಜೈ ಪಬ್‌ ಜೀ’ ಎಂಬ ಪದದಿಂದಲೇ ಉತ್ತರ ಆರಂಭಿಸಿದ್ದು, ಇಡೀಯ “ಆಟ’ವನ್ನೇ ವಿಶ್ಲೇಷಿಸಿದ್ದಾನೆ.

ಪರೀಕ್ಷಾ ಫಲಿತಾಂಶ ಹೊರಬಿದ್ದ ಬಳಿಕವೇ ಈ ಕುರಿತು ವಿದ್ಯಾರ್ಥಿಯ ಪಾಲಕರಿಗೆ ಮಗನ ಈ ಘನಕಾರ್ಯ ಗೊತ್ತಾಗಿದ್ದು. ಜೂನ್‌ನಲ್ಲಿ ನಡೆಯಲಿರುವ ಪುನರಾವರ್ತಿತ ಪರೀಕ್ಷೆಗೆ ತಮ್ಮ ಮಗನನ್ನು ತಯಾರುಗೊಳಿಸುವಂತೆ ಶಾಲಾ ಆಡಳಿತ ಮಂಡಳಿ ಪಾಲಕರಿಗೆ ಸಲಹೆ ಮಾಡಿದೆ. ಈ ವಿದ್ಯಾರ್ಥಿಯು ಪ್ರತಿಭಾವಂತನಾಗಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.73ರಷ್ಟು ಅಂಕ ಗಳಿಸಿದ್ದ.ಆದರೆ ಕಾಲೇಜು ಮೆಟ್ಟಲು ಹತ್ತಿದ್ದ ಬಳಿಕ ಪಬ್‌ಜೀ ದಾಸನಾಗಿಬಿಟ್ಟಿದ್ದ.

ಮನೆಯಲ್ಲಿ ಸದಾ “ಪಬ್‌ ಜೀ’ ಮೊಬೈಲ್‌ ಗೇಮ್‌ನಲ್ಲಿ ತಲ್ಲೀನನಾಗಿರುತ್ತಿದ್ದ ಎಂದು ಪಾಲಕರು ಮಾಹಿತಿ ನೀಡಿದ್ದು. ಇದೂಈಗ ವಿದ್ಯಾರ್ಥಿಯನ್ನು ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಿದ್ದಾರೆ.