ಉಡುಪಿ ನವೆಂಬರ್ 23: ಪ್ಲ್ಯಾಟ್ ಒಂದರ ಲಿಪ್ಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಐವರು ವಿಧ್ಯಾರ್ಥಿಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿಯ ಇಂದ್ರಾಳಿಯಲ್ಲಿ ನಡೆದಿದೆ.


ಇಂದ್ರಾಳಿಯ ಯುನೈಟೆಡ್ ಐಕಾನ್ ನೆಲ ಮತ್ತು ಮೂರು ಮಹಡಿಗಳ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದ ಮಣಿಪಾಲದ ವಿದ್ಯಾರ್ಥಿಗಳು ಮಧ್ಯರಾತ್ರಿ 12.10ರ ಸುಮಾರಿಗೆ ನೆಲಮಹಡಿಯಲ್ಲಿ ಲಿಫ್ಟ್‌ನೊಳಗೆ ಸಿಲುಕಿಕೊಂಡಿದ್ದರು. ಹೊರಗೆ ಬರಲಾರದ ಸ್ಥಿತಿಯಲ್ಲಿದ್ದ ಅವರು ಕೂಡಲೇ ಸ್ನೇಹಿತರನ್ನು ಸಂಪರ್ಕಿಸಿ ಅವರ ಮೂಲಕ ಉಡುಪಿ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದರು. ತತ್‌ಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬಂದಿ ಸುಮಾರು ಅರ್ಧ ತಾಸು ಕಾರ್ಯಾಚರಣೆ ನಡೆಸಿ,  ಸಿಲುಕಿಕೊಂಡಿದ್ದ ಐವರನ್ನು ಸುರಕ್ಷಿತವಾಗಿ ಹೊರಗೆ ತಂದರು.

Read This – ದಕ್ಷಿಣಆಫ್ರಿಕಾ ವಿರುದ್ದ ಏಕದಿನ ಸರಣಿಗೆ ಕ್ಯಾಪ್ಟನ್ ಆಗಿ ಆಯ್ಕೆಯಾದ ಕೆಎಲ್ ರಾಹುಲ್

ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರವೀಂದ್ರ, ಪ್ರಮುಖ ಫೈರ್‌ಮನ್ ರಾಘವೇಂದ್ರ, ಫೈರ್‌ಮನ್ ರವಿ ನಾಯಕ್‌, ಚಾಲಕ ಸುಧೀರ್ ಭಾಗವಹಿಸಿದ್ದರು.

Share Information