ದ್ವಿತೀಯ ಪಿಯುಸಿಯಲ್ಲಿ ಫೇಲ್ ವಿಧ್ಯಾರ್ಥಿನಿ ಆತ್ಮಹತ್ಯೆ

ಉಡುಪಿ ಎಪ್ರಿಲ್ 16: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ಉಡುಪಿಯಲ್ಲಿ ವಿಧ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಉಡುಪಿ ಜಿಲ್ಲೆಯ ಹೆಬ್ರಿಯ ನಡುಮನೆ ಗ್ರಾಮದ ನಿವಾಸಿಯಾಗಿರುವ ಪ್ರಜ್ಞಾ ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿ. ಈಕೆ ಕನ್ನಡ ವಿಷಯದಲ್ಲಿ ಫೇಲ್ ಆದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಪ್ರಜ್ಞಾ ಬ್ರಹ್ಮಾವರ ಬೋರ್ಡ್ ಪಿಯು ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ಆರ್ಟ್ಸ್ ವಿಭಾಗದಲ್ಲಿ ಕಲಿಯುತ್ತಿದ್ದಳು, ಈ ಬಾರಿಯ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 4 ಅಂಕ ಪಡೆದು ಫೇಲ್ ಹಿನ್ನಲೆಯಲ್ಲಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಕನ್ನಡ‌ ಬಿಟ್ಟು ಉಳಿದೆಲ್ಲ‌ ಸಬ್ಜೆಕ್ಟ್‌ನಲ್ಲಿ 60ಕ್ಕಿಂತ ಹೆಚ್ಚು ಅಂಕವನ್ನು ಪ್ರಜ್ಞಾ ಪಡೆದಿದ್ದಳು.

ಕನ್ನಡ ಭಾಷೆಯಲ್ಲಿ‌ ಫೇಲ್ ಎನ್ನುವ ವಿಷಯವನ್ನು ಬೆಂಗಳೂರಿನ ಸಂಬಂಧಿಕರು ಈಕೆಗೆ ತಿಳಿದ್ದರು ಎಂದು ಹೇಳಲಾಗಿದ್ದು, ಫಲಿತಾಂಶದಿಂದ ಮನನೊಂದು ಸೀರೆಯಿಂದ ಫ್ಯಾನಿಗೆ ನೇಣು ಬಿಗಿದು‌ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ತಾಯಿ‌, ಅಜ್ಜಿ ಇರೋವಾಗ್ಲೇ ನೇಣಿಗೆ ಶರಣಾಗಿದ್ದಾಳೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.