ಉಡುಪಿ ಸೆಪ್ಟೆಂಬರ್ 20: ಸಮುದ್ರಕ್ಕಿಳಿಯದಂತೆ ಸ್ಥಳೀಯರು ಎಚ್ಚರಿಕೆ ನೀಡಿದರೂ ಕ್ಯಾರೆ ಮಾಡದೇ ಸಮುದ್ರಕ್ಕಿಳಿದ 6 ವಿಧ್ಯಾರ್ಥಿಗಳ ಪೈಕಿ ಓರ್ವ ನೀರುಪಾಲಾದ ಘಟನೆ ಮಟ್ಟು ಬೀಚ್ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.


ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿ ಮಧ್ಯಪ್ರದೇಶ ಮೂಲದ ವೀರೂರುಲ್ಕರ್ ( 18) ಮೃತಪಟ್ಟ ವಿದ್ಯಾರ್ಥಿ. ಮಟ್ಟು ಬೀಚ್ ಬಳಿ ಸಮುದ್ರಕ್ಕಿಳಿದ ವಿಧ್ಯಾರ್ಥಿಗಳಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದರು, ಆದರೂ ವಿಧ್ಯಾರ್ಥಿಗಳು ಬೇರೆ ಕಡೆ ತೆರಳಿ ಮತ್ತೆ ಸಮುದ್ರಕ್ಕಿಳಿದಿದ್ದಾರೆ. ಈ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳೀಯರಾದ ಆರ್ಯನ್, ಪ್ರವೀಣ್ ಮತ್ತಿತರರು ರಕ್ಷಣಾ ಕಾರ್ಯ ನಡೆಸಿದ್ದರು. ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Share Information