Connect with us

    BELTHANGADI

    ಗುರುವಾಯನಕೆರೆ ಕೆರೆಯಲ್ಲಿ ಪತ್ತೆಯಾದ ಬೆಂಗಳೂರಿನ ವಿಧ್ಯಾರ್ಥಿ ಶವ

    ಗುರುವಾಯನಕೆರೆ ಕೆರೆಯಲ್ಲಿ ಪತ್ತೆಯಾದ ಬೆಂಗಳೂರಿನ ವಿಧ್ಯಾರ್ಥಿ ಶವ

    ಬೆಳ್ತಂಗಡಿ ಜುಲೈ 26: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿಯ ಬ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿದ್ಯಾರ್ಥಿ ಶವ ಕೆರೆಯಲ್ಲಿ ಪತ್ತೆಯಾಗಿದೆ‌‌.

    ನಿನ್ನೆ ಕೆರೆಯ ಬಳಿಯಲ್ಲಿ ಬೆಂಗಳೂರಿನ ಐಟಿಐ ವಿದ್ಯಾಮಂದಿರದ ಹೈಸ್ಕೂಲ್ ವಿದ್ಯಾರ್ಥಿ ಯಶವಂತ್ ಸಾಯಿ ಗೆ ಸೇರಿದ ಬ್ಯಾಗ್,ಆಧಾರ್ ಕಾರ್ಡ್, ಸ್ಕೂಲ್ ಐಡಿ ಕಾರ್ಡ್,ಬಸ್ ಟಿಕೆಟ್ ಈ ಬ್ಯಾಗ್ ನಲ್ಲಿ ಪತ್ತೆಯಾಗಿತ್ತು.

    ಸಂಶಯಗೊಂಡ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೋಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಕೆರೆಯಲ್ಲಿ ಹುಡುಕಾಟ ನಡೆಸಿದ್ದರು.

    ಇಂದು ಬೆಳಿಗ್ಗೆ ಕೆರೆಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ವಿದ್ಯಾರ್ಥಿ ಬೆಳ್ತಂಗಡಿಗೆ ಯಾಕಾಗಿ ಬಂದ, ಸಾವಿಗೆ ಕಾರಣ ಏನು ಎನ್ನುವ ಕುರಿತು ಬೆಳ್ತಂಗಡಿ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply