ಸ್ಮಾರ್ಟ್ ವಾಚ್ ಮೂಲಕ ನಕಲು ಮಾಡಲು ಹೋಗಿ ಸಿಕ್ಕಬಿದ್ದ ಇಂಜಿನಿಯರಿಂಗ್ ವಿಧ್ಯಾರ್ಥಿ

ಉಡುಪಿ ನವೆಂಬರ್ 27: ಇಂಜಿನಿಯರಿಂಗ್ ವಿಧ್ಯಾರ್ಥಿಯೊಬ್ಬ ಸ್ಮಾರ್ಟ್ ವಾಚ್ ಮೂಲಕ ನಕಲು ಮಾಡಲು ಹೋಗಿ ಸಿಕ್ಕಬಿದ್ದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.

ಎಂಐಟಿ ಕಾಲೇಜು ಎಂಜಿನಿಯರ್ ವಿದ್ಯಾರ್ಥಿ ಸ್ಮಾರ್ಟ್ ವಾಚ್ ಕಟ್ಟಿಕೊಂಡು ಹೋಗಿ ಪರೀಕ್ಷೆಯಲ್ಲಿ ನಕಲು ಮಾಡಿದ್ದಾನೆ.

ಈ ಸ್ಮಾರ್ಟ್ ವಾಚ್ ಎಷ್ಟು ತಂತ್ರಜ್ಞಾನದಿಂದ ಕೂಡಿದೆ ಎಂದರೆ ಇಡೀ ಪುಸ್ತಕವನ್ನು ಇದರೊಳಗೆ ಅಪ್ಲೋಡ್ ಮಾಡಬಹುದು. ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪ್ರೋಗ್ರಾಂಗಳು, ಅದರ ಸೂತ್ರಗಳು, ಕೆಲ ಉತ್ತರಗಳು ಮೆಮೋರಿ ಕಾರ್ಡ್ ಮೂಲಕ ಸ್ಟೋರ್ ಮಾಡಿಕೊಳ್ಳಬಹುದು. ಝೂಮ್ ಮಾಡುವ ಆಪ್ಶನ್ ಕೂಡ ಇದೆ.

ನಕಲು ಮಾಡಿದ ವಿದ್ಯಾರ್ಥಿ ಯಾರು ಎಂಬುದು ಗೌಪ್ಯವಾಗಿ ಇಡಲಾಗಿದೆ. ನಕಲು ಮಾಡುತ್ತಿದ್ದ ವಿಧ್ಯಾರ್ಥಿಯನ್ನು ಎಕ್ಸಾಂ ಹಾಲ್ ನಿಂದ ಹೊರಗೆ ಕಳುಹಿಸಲಾಗಿದೆ. ಸದ್ಯ ವಾಚ್‍ನ ಕಾರ್ಯವೈಖರಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.