ವಿಟ್ಲ ಫೆಬ್ರವರಿ 11: ಇಬ್ಬರು ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಈ ವೇಳೆ ಇಬ್ಬರು ವಿದ್ಯಾರ್ಥಿಗಳಿಗೆ ಚೂರಿಯಿಂದ ಗೀಚಿದ ಗಾಯಗಳಾದ ಘಟನೆ ವಿಟ್ಲದ ಐಟಿಐ ಕಾಲೇಜಿನಲ್ಲಿ ನಡೆದಿದೆ.

ವಿಟ್ವದ ಐಟಿಐ ಕಾಲೇಜೊಂದರ ಇಬ್ಬರು ವಿಧ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ ಎಂದು ಹೇಳಲಾಗಿದ್ದು, ಈ ವೇಳೆ ಇಬ್ಬರೂ ಚೂರಿ ಇಂದ ಗಾಯಮಾಡಿಕೊಂಡಿದ್ದಾರೆ. ಈ ವೇಳೆ ಗಲಾಟೆ ತಪ್ಪಿಸಲು ಬಂದ ಮತ್ತೊಬ್ಬ ವಿಧ್ಯಾರ್ಥಿಗೂ ಗಾಯಗಳಾಗಿದೆ ಎಂದು ಹೇಳಲಾಗಿದೆ.
ಪುತ್ತೂರು ಬನ್ನೂರು ನಿವಾಸಿ ಮಹಮ್ಮದ್ ರಿಯಾನ್ (18) ಮತ್ತು ಮಂಜೇಶ್ವರ ದೈಗೋಳಿ ನಿವಾಸಿ ಯಜ್ಞೇಶ್ ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಗಾಯಾಳು ವಿಧ್ಯಾರ್ಥಿಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಒರ್ವ ವಿಧ್ಯಾರ್ಥಿಗೆ ಬೆನ್ನಿಗೆ ಗಾಯವಾಗಿದ್ದರೆ ಮತ್ತೊಬ್ಬನಿಗೆ ತೊಡೆ ಭಾಗದಲ್ಲಿ ಗಾಯಗಳಾಗಿದೆ. ಘಟನೆ ತಿಳಿದು ಸಮುದಾಯ ಆಸ್ಪತ್ರೆ ಬಳಿ ಸೇರಿದ್ದ ಜನರನ್ನು ಪೊಲೀಸರು ಚದುರಿಸಿದ್ದಾರೆ. ಆಸ್ಪತ್ರೆಗೆ ಬಂಟ್ವಾಳ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.



