DAKSHINA KANNADA
ಬೀದಿಗೆ ಬಂದ ಜಗಳ, ಮಂಗಳೂರಿನಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳ ಮಧ್ಯೆ ಮರಾಮಾರಿ.!!
ಮಂಗಳೂರು: ಮೊನ್ನೆ ಮೊನ್ನೆ ಮಂಗಳೂರು ನಗರದಲ್ಲಿ ಪಾಲಿಕೆ ನಡೆಸಿದ್ದ ಬೀದಿಬದಿ ವ್ಯಾಪಾರಿಗಳ ತೆರವಿನ ಟೈಗರ್ ಕಾರ್ಯಾಚರಣೆ ವಿರುದ್ದ ಒಗ್ಗೂಡಿ ಪ್ರತಿಭಟನೆ ನಡೆಸಿದ್ದ ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಮಧ್ಯೆ ಗುರುವಾರ ಮಾರಾಮಾರಿ ನಡೆದಿದೆ.
ದ.ಕ.ಜಿಲ್ಲಾ ಬೀದಿ ವ್ಯಾಪಾರಿಗಳ ಶ್ರೇಯಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತಿತರರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ ಮತ್ತು ಉಪಾಧ್ಯಕ್ಷ ರಹ್ಮಾನ್ ಅಡ್ಯಾರ್ ಎಂಬವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಂದರು ಠಾಣೆಗೆ ದೂರು ದಾಖಲಾಗಿದೆ.
ಈ ಮಧ್ಯೆ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ನವಾಝ್ ಕಣ್ಣೂರು, ಆನಂದ ಮತ್ತಿತರರ ವಿರುದ್ಧ ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್. ಬಂದರು ಠಾಣೆಗೆ ದೂರು ನೀಡಿದ್ದಾರೆ. ಗುರುವಾರ ಸಂಜೆ ಸುಮಾರು 4ಕ್ಕೆ ಸಂಘದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾಗ ಆರೋಪಿಗಳು ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಲು ಮುಂದಾಗಿ ಸಂಘದ ಬೋರ್ಡ್ ಮತ್ತು ಸಿಐಟಿಯು ಬಾವುಟವನ್ನು ಎಸೆದು ದಾಂಧಲೆ ನಡೆಸಿದ್ದಾರೆ ಎಂದು ಸಂತೋಷ್ ದೂರಿನಲ್ಲಿ ತಿಳಿಸಿದ್ದಾರೆ.
You must be logged in to post a comment Login