Connect with us

    LATEST NEWS

    ಪ್ರವಾಹದಲ್ಲಿ ಮ್ಯಾನ್ಮಾರ್ ನ್ನು ಮುಳುಗಿಸಿದ ಟೈಫೂನ್ ಚಂಡಮಾರುತ – 200ಕ್ಕೂ ಅಧಿಕ ಬ*ಲಿ

    ಮ್ಯಾನ್ಮಾರ್‌ ಸೆಪ್ಟೆಂಬರ್ 17: ಟೈಫೂನ್ ಯಾಗಿ ಚಂಡಮಾರುತದ ಅಬ್ಬಕ್ಕೆ ಇಡಿ ಮ್ಯಾನ್ಮಾರ್ ದೇಶ ಪ್ರವಾಹ ದಲ್ಲಿ ಮುಳುಗಿದೆ. ಚಂಡಮಾರುತದ ಅಬ್ಬರಕ್ಕೆ ಒಂದೇ ವಾರದಲ್ಲಿ ಕನಿಷ್ಠ 226 ಜನ ಮೃತಪಟ್ಟಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.


    ಭಾರತದ ನೆರೆಯ ರಾಷ್ಟ್ರವಾದ ಮ್ಯಾನ್ಮಾರ್ ಸಂಕಷ್ಟದಲ್ಲಿ ಮುಳುಗಿದೆ. ಈಗಾಗಲೇ ದಂಗೆಯಿಂದ ಲಕ್ಷಾಂತರ ಜನರನ್ನು ಕಳೆದಿಕೊಂಡಿರುವ ಮ್ಯಾನ್ಮಾರ್ ನಲ್ಲಿ ಇದೀಗ ಪ್ರಕೃತಿ ಮುನಿಸಿಕೊಂಡಿದ್ದು, ಟೈಪೂನ್ ಚಂಡಮಾರುತದ ಅಬ್ಬರಕ್ಕೆ ನೂರಾರು ಜನ ಸಾವನಪ್ಪಿದ್ದಾರೆ.


    ರಾಜಧಾನಿ ಯಾಂಗೋನ್‌, ಶಾನ್‌ ರಾಜ್ಯದಲ್ಲಿ ಪ್ರವಾಹದಿಂದ ಹೆಚ್ಚು ಹಾನಿಯಾಗಿದೆ. ಮಂಡಾಲೆ ಪ್ರದೇಶವೊಂದರಲ್ಲೇ 40 ಸಾವಿರ ಎಕರೆಯಷ್ಟು ಕೃಷಿ ಭೂಮಿ ಜಲಾವೃತಗೊಂಡಿದ್ದು, 26 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. 9 ರಾಜ್ಯಗಳಲ್ಲಿ ಈಗಾಗಲೇ 388 ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದ್ದು, ಹಲವು ಹಿತೈಷಿಗಳು ಕುಡಿಯುವ ನೀರು, ಆಹಾರ, ಬಟ್ಟೆಯ ನೆರವನ್ನು ಒದಗಿಸಿದ್ದಾರೆ ಎಂದು ಮ್ಯಾನ್ಮಾರ್‌ ಮಿಲಿಟರಿ ಸರ್ಕಾರದ ಮಾಧ್ಯಮ ‘ಗ್ಲೋಬಲ್‌ ನ್ಯೂ ಲೈಟ್‌ ಆಫ್‌ ಮ್ಯಾನ್ಮಾರ್’ ವರದಿ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply