Connect with us

    LATEST NEWS

    ಕೊಣಾಜೆ – ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ತೂರಾಟ

    ಮಂಗಳೂರು ಮಾರ್ಚ್ 4: ಮನೆಯೊಳಗೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಕಲ್ಲು ಎಸೆದು ಹಾನಿಗೊಳಿಸಿರುವ ಘಟನೆ ಕೊಣಾಜೆಯಲ್ಲಿ ನಡೆದಿದೆ.


    ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಜಲ್ಲಿಕ್ರಾಸ್ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಈ ಘಟನೆ ನಡೆದಿದ್ದು, ಜಲ್ಲಿಕ್ರಾಸ್ ನಿವಾಸಿ ಅಬ್ಬಾಸ್ ಅವರ ಮನೆಯಂಗಳದಲ್ಲಿ ನಿಲ್ಲಿಸಿಡಲಾಗಿದ್ದ ಓಮ್ನಿ ಹಾಗೂ ಕ್ವಾಲಿಸ್ ಕಾರುಗಳ ಗಾಜುಗಳಿಗೆ ದುಷ್ಕರ್ಮಿಗಳು ಕಲ್ಲು ಎಸೆದು ಹಾನಿ ಮಾಡಿದ್ದಾರೆ. ಈ  ಸಂದರ್ಭ ಮನೆಯ ಕಿಟಕಿಯ ಗಾಜು ಕೂಡ ಹಾನಿಯಾಗಿದೆ.

    ಸ್ಥಳಕ್ಕಾಗಮಿಸಿದ ಕೊಣಾಜೆ ಠಾಣಾ ಪೊಲೀಸರಿಂದ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *