Connect with us

DAKSHINA KANNADA

ಸುರತ್ಕಲ್ ಮಸೀದಿಗೆ ಮಧ್ಯರಾತ್ರಿ ಕಲ್ಲೂ ತೂರಾಟ ನಡೆಸಿದ ದುಷ್ಕರ್ಮಿಗಳು ..!

ಮಂಗಳೂರು :  ನಿನ್ನೆ ಭಾನುವಾರ ಸಂಜೆ ಬಂಟ್ವಾಳದಲ್ಲಿ ಯುವಕನಿಗೆ ಚೂರಿ ಇರಿತ ಪ್ರಕರಣವಾದ ಬೆನ್ನಲ್ಲೇ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಮಸೀದಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಸುರತ್ಕಲ್‌ ಸಮೀಪದ ಕೃಷ್ಣಾಪುರ ಜನತಾ ಕಾಲೊನಿಯ ಮಸೀದಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಯ ಮಸೀದಿಯ ಕಿಟಕಿ ಗಾಜುಗಳು ಒಡೆದಿವೆ ಜೊತೆಗೆ ಕಲ್ಲು ತೂರಾಟದದಿಂದ ಅಪಾರ ಹಾನಿ ಕೂಡ ಸಂಭವಿಸಿದೆ.

ಕೃಷ್ಣಾಪುರದ ಸಾದುಲಿ ಜುಮಾ ಮಸೀದಿ ಹಾಗೂ ಹಯಾತುಲ್‌ ಇಸ್ಲಾಮ್‌ ಮದರಸ ಕಟ್ಟಡಕ್ಕೆ ಕಿಡಿಗೇಡಿಗಳು  ಮಧ್ಯರಾತ್ರಿ ಸುಮಾರು 2.30 ರ ಸುಮಾರಿಗೆ ಕಲ್ಲು  ತೂರಾಟ ನಡೆಸಿ ಪರಾರಿಯಾಗಿದ್ದಾರೆ.

ರಜಾದಿನವಾದ ಭಾನುವಾರ ರಾತ್ರಿ ಸುಮಾರು 1.30 ಗಂಟೆ ವರೆಗೆ ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಆ ಕಾರ್ಯಕ್ರಮ ಮುಗಿದ ಬಳಿಕ ಎಲ್ಲರೂ ತೆರಳಿದ್ದರು . ಆ ಸಮಯದಲ್ಲಿ ಈ ಘಟನೆ ನಡೆದಿದೆ.

ಈ ಬಗ್ಗೆ ಸಮಿತಿ ಕಾರ್ಯದರ್ಶಿ ದಾವೂದ್‌ ಹಕೀಂ ಸುರತ್ಕಲ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಕೆಲ ಸಮಯದಿಂದ ತಣ್ಣಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಕೋಮು ಸೂಕ್ಷ್ಮವಾಗುತ್ತಿದ್ದು ಅನಾಹುತಗಳು ನಡೆಯುವ ಮೊದಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.