ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಕಾರಿಗೆ ಕಲ್ಲು

ಬಂಟ್ವಾಳ ಸೆಪ್ಟೆಂಬರ್ 10: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರಿಗೆ ಕಲ್ಲು ಎಸೆದ ಘಟನೆ ಬಂಟ್ವಾಳದ ಬೊಳಂಗಡಿ ಎಂಬಲ್ಲಿ ನಡೆದಿದೆ.

ಕಾಂಗ್ರೇಸ್ ಕಾರ್ಯಕರ್ತರು ತೈಲ ಬೆಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಶಾಸಕ ರಾಜೇಶ್ ನಾಯ್ಕ್ ಕಾರಿಗೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಕೆಲವು ಮಂದಿ ಕಲ್ಲೆಸಿದಿದ್ದಾರೆ. ಕಲ್ಲೇಟಿನಿಂದ ಕಾರಿನ ಹಿಂದಿನ ಭಾಗಕ್ಕೆ ತೊಂದರೆಯಾಗಿದೆ‌.

ಈ ಘಟನೆ ನಡೆದ ತಕ್ಷಣ ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ‌. ಸ್ಥಳಕ್ಕೆ ಭೇಟಿ ನೀಡಿದ ಪೋಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ‌. ಬಂದನ್ನೇ ನೆಪವಾಗಿಟ್ಟು ಕೆಲವು ಕಿಡಿಗೇಡಿಗಳು ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಉಂಟು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಜಿಲ್ಲೆಯ ಹಲವೆಡೆ ಗುಂಪು ಕಟ್ಟಿಕೊಂಡು ನಿಂತಿರುವ ಈ ಕಿಡಿಗೇಡಿಗಳನ್ನು ಚದುರಿಸುವ ಕನಿಷ್ಟ ಪ್ರಯತ್ನವನ್ನೂ ಪೋಲೀಸರು ಮಾಡುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

28 Shares

Facebook Comments

comments