Connect with us

    KARNATAKA

    ಮಲ್ಪೆ ಬೀಚ್ ನಲ್ಲಿ ಇಂಜೆಕ್ಷನ್ ಭೀತಿ

    ಮಲ್ಪೆ ಬೀಚ್ ನಲ್ಲಿ ಇಂಜೆಕ್ಷನ್ ಭೀತಿ

    ಉಡುಪಿ ಸೆಪ್ಟೆಂಬರ್ 12: ಉಡುಪಿ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ನಲ್ಲಿ  ಕಳೆದ ಎರಡು ದಿನಗಳಿಂದ ಬೀಚಿನಲ್ಲಿ ಸಮುದ್ರಕ್ಕೆ ಇಳಿದವರಿಗೆ ತೊರಕೆ ಮೀನು ಅಥವಾ ಸ್ಟಿಂಗ್ ರೇ ಇಂಜೆಕ್ಷನ್ ರುಚಿ ತೋರಿಸಿದೆ.

    ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಕಂಡು ಬರುವ ಈ ಮೀನು ಈ ಅವಧಿಗೆ  ಸಂತಾನೋತ್ಪತ್ತಿಗಾಗಿ ಕಡಲ ತಡೆಗೆ ಬರುತ್ತದೆ. ಅದರಂತೆ ಈ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ತೀರ ಸೇರಿವೆ .ಇನ್ನು ಒಂದು ವಾರದವರೆಗೆ ಈ ಮೀನುಗಳು ಸಮುದ್ರ ಕಿನಾರೆಯಲ್ಲಿ ಇರುತ್ತವೆ ಎಂದು ಹೇಳಲಾಗಿದೆ .

    ಸಂತಾನೋತ್ಪತ್ತಿಗಾಗಿ ಕಡಲ ಕಿನಾರೆಗೆ ಆಗಮಿಸುವ ಸಂದರ್ಭದಲ್ಲಿ ಈ ತೊರಕೆ ಮೀನುಗಳು ತೀರಾ ಆಕ್ರಮಣಕಾರಿಯಾಗಿದ್ದು, ಸಮುದ್ರದಲ್ಲಿ ಈಜಲು ನೀರಿಗಿಳಿಯುವ ಪ್ರವಾಸಿಗರಿಗೆ ಇದರ ಚೂಪಾದ ಬಾಲದ ಇಂಜೆಕ್ಷನ್ ಭಾಗ್ಯ ಲಭಿಸಿದೆ.

    ಕಳೆದ ಶುಕ್ರವಾರದಿಂದ ಮಲ್ಪೆ ಬೀಚ್ ನಲ್ಲಿ ಈ ತೊರಕೆ ಮೀನಿನ ದಾಳಿಯ ಸುಮಾರು 12 ಪ್ರಕರಣಗಳು ವರದಿಯಾಗಿದೆ. ದಾಳಿಗೆ ಒಳಗಾದ ಪ್ರವಾಸಿಗರು ಇಲ್ಲಿರುವ ಲೈಫ್ ಗಾರ್ಡ್ ಗಳ ಬಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚು ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಮುಂಜಾಗೃತೆ:

    ತೊರಕೆ ಮೀನು ಬಾಲದ ಮುಳ್ಳಿನಿಂದ ಚುಚ್ಚಿದಾಗ ವಿಪರೀತ ರಕ್ತ ಸ್ರಾವವಾಗುತ್ತದೆ ಹಾಗೂ ತುಂಬಾ ನೋವು ಉಂಟಾಗುತ್ತದೆ. ತೊರಕೆ ಮೀನಿನ ಮುಳ್ಳು ನಂಜಿನ ಗುಣವುಳ್ಳದ್ದರಿಂದ ತೊರಕೆ ಮೀನಿನ ಮುಳ್ಳು ಚುಚ್ಚಿದ ಬಳಿಕ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

    ಪ್ರವಾಸಿಗರಿಗೆ ಎಚ್ಚರಿಕೆ :

    ಮಲ್ಪೆ ಬೀಚ್ ನಲ್ಲಿ ತೊರಕೆ ಪ್ರತಾಪ ಕಳೆದ 7 ರಿಂದ 8 ವರ್ಷಗಳಿಂದ ನಡೆಯುತ್ತಿದೆ. ಮಳೆಗಾಲ ಕಳೆಯುತ್ತಿದಂತೆ ಸಮುದ್ರ ನೀರು ತಂಪಾಗುತ್ತದೆ. ಈ ಹಿನ್ನಲೆಯಲ್ಲಿ ಸಮುದ್ರ ತೀರಕ್ಕೆ ಮೊಟ್ಟೆ ಇಡಲು ತೊರೆಕೆಗಳು ಆಗಮಿಸುತ್ತವೆ. ಈ ಹಾವಳಿ ಇನ್ನೂ 10 ದಿನ ಮುಂದುವರೆಯುವ ಸಾಧ್ಯತೆ ಇದ್ದು. ಪ್ರವಾಸಿಗರು ಮಲ್ಪೆ ಬೀಚ್ ನಲ್ಲಿ ಸಮುದ್ರಕ್ಕೆ ಇಳಿಯುವ ಮೊದಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ.

    Share Information
    Advertisement
    Click to comment

    You must be logged in to post a comment Login

    Leave a Reply