Connect with us

LATEST NEWS

ಭೀಕರ ಪ್ರವಾಹ ಬಂದರೂ ರಾಜ್ಯ ಬಿಜೆಪಿ ಸರಕಾರ ಕೋಮಾದಲ್ಲಿದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಭೀಕರ ಪ್ರವಾಹ ಬಂದರೂ ರಾಜ್ಯ ಬಿಜೆಪಿ ಸರಕಾರ ಕೋಮಾದಲ್ಲಿದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಮಂಗಳೂರು ಅಕ್ಟೋಬರ್ 25: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನ ನಲುಗಿ ಹೋಗಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರಕಾರ ಕೋಮಾದಲ್ಲಿರುವಂತೆ ತೋರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಇದ್ದರೂ ಕೇಂದ್ರ ಸರಕಾರ ಹೃದಯಹೀನವಾಗಿ ವರ್ತಿಸುತ್ತಿದೆ. ಕೇವಲ ಜುಜುಬಿ ಮೊತ್ತ ಪರಿಹಾರ ನೀಡಿದ್ದಾರೆ. ಅದೂ ಬೈಇಲೆಕ್ಷನ್ ಇರುವ ಕಾರಣಕ್ಕಷ್ಟೆ 1200 ಕೋಟಿ ಕೊಟ್ಟಿದ್ದಾರೆ ಇಲ್ಲದಿದ್ದರೆ ಕೇಂದ್ರ ಇಷ್ಟನ್ನೂ ನೀಡುತ್ತಿರಲಿಲ್ಲ ಎಂದು ಹೇಳಿದರು. ಕೇಂದ್ರ ಸರಕಾರ ನೀಡಿರುವ ನೆರೆ ಪರಿಹಾರದ ಹಣ ಇವರೆಗೆ ಒಬ್ಬನಿಗೂ ತಲುಪಿಲ್ಲ ಎಂದು ಆರೋಪಿಸಿದರು.